ಉಡುಪಿ: ಕೃಷ್ಣಾಪುರ ಪರ್ಯಾಯ ಪ್ರಾರಂಭವಾಗುತ್ತಿದ್ದಂತೆಯೇ ಮುಂದಿನ ಪರ್ಯಾಯಕ್ಕೆ ಪುತ್ತಿಗೆ ಮಠ ಸಿದ್ದಗೊಳ್ಳುತ್ತಿದೆ. 2024-25 ರಲ್ಲಿ ಉಡುಪಿಯ ಶ್ರೀಕೃಷ್ಣ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ನಡೆಯಲಿರುವ ಪುತ್ತಿಗೆ ಮಠದ ಚತುರ್ಥ ಪರ್ಯಾಯದ ನಿಮಿತ್ತ ಪ್ರಮುಖ ಯೋಜನೆಗಳ ಕಾರ್ಯಾಲಯ "ಅಂತರ್ಯಾಮಿ" ಕೇಂದ್ರವನ್ನು ಪುತ್ತಿಗೆ ಮಠದ ಪೀಠಾಧಿಪತಿಗಳಾದ ಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರು ದೀಪವನ್ನು ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಪರ್ಯಾಯದ ಪ್ರಮುಖ ಯೋಜನೆಯಾದ ಕೋಟಿಗೀತಾಲೇಖನ ಯಜ್ಞದ ಅಭಿಯಾನಕ್ಕೂ ಶ್ರೀಪಾದರು ಚಾಲನೆಯನ್ನು ನೀಡಿದರು. ಈ ಸಂದರ್ಭದಲ್ಲಿ ನಾಗರಾಜ ಆಚಾರ್ಯ, ಪ್ರಸನ್ನ ಆಚಾರ್ಯ, ರತೀಶ್ ತಂತ್ರಿ, ವಿಷ್ಣುಮೂರ್ತಿ ಉಪಾಧ್ಯಾಯ, ಪ್ರಮೋದ ಸಾಗರ್, ಆಸ್ಟ್ರೇಲಿಯಾದ ಪ್ರಸಿದ್ಧ ಯೋಗಗುರು ರಾಜೇಂದ್ರ ವೆಂಕನಮೂಲೆ, ಡಾ. ಸುಗುಣದಾಸ್. ಕೆ.ವಿ.ರಮಣ, ಸಂತೋಷ ಶೆಟ್ಟಿ ಮುಂತಾದವರು ಭಾಗವಹಿಸಿದ್ದರು.
Kshetra Samachara
20/01/2022 03:34 pm