ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಟ್ಲ: ಕೇಪು ಶ್ರೀ ಮಲರಾಯ ಭಂಡಾರ ಜಾತ್ರೋತ್ಸವಕ್ಕೆ ಆಗಮನ

ವಿಟ್ಲ: ಮಹತೋಭಾರ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೋತ್ಸವದ ಪ್ರಯುಕ್ತ ಕೇಪುವಿನಿಂದ ದೇವರ ಭಂಡಾರ ಆಗಮಿಸಿದೆ. ಇತ್ತೀಚೆಗೆ ದೇವಸ್ಥಾನದ ಅನುವಂಶೀಯ ಮೊಕ್ತೇಸರರು,

ವಿಟ್ಲ ಅರಮನೆಯ ಬಂಗಾರು ಅರಸರ ಉಪಸ್ಥಿತಿಯಲ್ಲಿ ಧ್ವಜಾರೋಹಣ ನಡೆದು, 9 ದಿನಗಳ ಜಾತ್ರೋತ್ಸವಕ್ಕೆ ಚಾಲನೆ ನೀಡಲಾಗಿತ್ತು.

ಜ.18ರಂದು ಕೇಪುವಿನಿಂದ ಶ್ರೀ ಮಲರಾಯ ದೈವದ ಭಂಡಾರ ಕ್ಷೇತ್ರಕ್ಕೆ ಆಗಮಿಸಿ, ಬಯ್ಯದ ಬಲಿ ನಡೆಯಿತು. ಕೇಪು ಮಲರಾಯ ಭಂಡಾರದ ಮನೆಯಿಂದ ಹೊರಟು, ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ದೇವರ ಭೇಟಿಯಾಗಿ, ನಂತರ ಅಪ್ಪೆರಿಪಾದೆ ಮೂಲಕ ವಿಟ್ಲ ಪೇಟೆಗೆ ಆಗಮಿಸಿತ್ತು. ಬಳಿಕ ದೇವರ ಭಂಡಾರ ಶ್ರೀ ಪಂಚಲಿಂಗೇಶ್ವರ ಸನ್ನಿಧಾನಕ್ಕೆ ತೆರಳಿದೆ. ಮೆರವಣಿಗೆಯಲ್ಲಿ ಆಕರ್ಷಕ ತಾಲೀಮ್, ಚೆಂಡೆ- ವಾದ್ಯ ಮೇಳ ಕಣ್ಮನ ಸೆಳೆಯಿತು.

Edited By : Shivu K
Kshetra Samachara

Kshetra Samachara

19/01/2022 12:40 pm

Cinque Terre

9.29 K

Cinque Terre

0

ಸಂಬಂಧಿತ ಸುದ್ದಿ