ಉಡುಪಿ:ಉಡುಪಿಯ ಯುವ ಕಲಾವಿದ ಮಹೇಶ್ ಮರ್ಣೆ ವಿಶಿಷ್ಟ, ಅಪರೂಪದ ಕಲಾವಿದ.ತಮ್ಮ ವಿಶಿಷ್ಟ ಪ್ರತಿಭೆಗಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಎಕ್ಸ್ ಕ್ಲೂಸಿವ್ ವರ್ಲ್ಡ್ ರೆಕಾರ್ಡ್ ಗೆ ಸೇರ್ಪಡೆಗೊಂಡವರು. ಅಶ್ವತ್ಥ ಎಲೆಯಲ್ಲಿ ಇವರು ಮೂಡಿಸುವ ಚಿತ್ರಗಳು ಯೂನಿಕ್.ಹೆಸರಾಂತ ವ್ಯಕ್ತಿಗಳ ,ರಾಜಕಾರಣಿಗಳ,ಸೆಲೆಬ್ರಿಟಿಗಳ ಚಿತ್ರವನ್ನು ಎಲೆಯಲ್ಲಿ ಮೂಡಿಸಿರುವ ಇವರು ,ಇದೀಗ ಭಾವೀ ಪರ್ಯಾಯ ಶ್ರೀಗಳಾದ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರ ಕಲಾಕೃತಿ ರಚಿಸಿ ಶುಭ ಕೋರಿದ್ದು ,ಮೆಚ್ಚುಗೆಗೆ ಪಾತ್ರವಾಗಿದೆ.
Kshetra Samachara
17/01/2022 12:05 pm