ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಸಂಪ್ರದಾಯಗಳ "ಕಾಶಿ"ಕೃಷ್ಣಮಠದಲ್ಲಿ ಪರ್ಯಾಯಕ್ಕೆ ಕ್ಷಣಗಣನೆ

ಉಡುಪಿ: ನಾಡಹಬ್ಬ ಪರ್ಯಾಯ ಮಹೋತ್ಸವ ಈ ಬಾರಿ ಕೋವಿಡ್ ನಡುವೆಯೇ ಬಂದಿದೆ.ಕೋವಿಡ್ ನಿಯಮಾವಳಿಗಳನ್ನು ಪಾಲಿಸಿ ಸರಳ ರೀತಿಯಲ್ಲಿ ಪರ್ಯಾಯ ನಡೆಸಲು ತೀರ್ಮಾನಿಸಲಾಗಿದೆ.

ಅದಮಾರು ಶ್ರೀಗಳಿಂದ ಕೃಷ್ಣಾಪುರ ಶ್ರೀಗಳು ಶ್ರೀಕೃಷ್ಣ ಪೂಜಾಧಿಕಾರ ಪಡೆಯುವ ಅಭೂತಪೂರ್ವ ಧಾರ್ಮಿಕ ವಿಧಿ ಇದು.ಈ ಹಿನ್ನೆಲೆಯಲ್ಲಿ ಕೃಷ್ಣಮಠ ಮತ್ತು ರಥಬೀದಿ ಆಕರ್ಷಕ ವಿದ್ಯುದ್ದೀಪಗಳಿಂದ ಅಲಂಕೃತಗೊಂಡು ಭಕ್ತರಲ್ಲಿ ಪುಳಕಕ್ಕೆ ಕಾರಣವಾಗಿದೆ. ನಾಳೆ ರಾತ್ರಿಯಿಂದ ಪರ್ಯಾಯ ಮಹೋತ್ಸವದ ವಿವಿಧ ಸಂಪ್ರದಾಯಗಳು ನಡೆದು, ಮಂಗಳವಾರ ಮುಂಜಾನೆ ರಾಜಾಂಗಣದಲ್ಲಿ ದರ್ಬಾರ್ ಸಭೆ ನಡೆಯುವುದರೊಂದಿಗೆ ಪರ್ಯಾಯ ಮಹೋತ್ಸವಕ್ಕೆ ತೆರೆ ಬೀಳಲಿದೆ.

ಭಕ್ತರು ಈ ಬಾರಿ ಮನೆಯಲ್ಲೇ ಕುಳಿತು ಟಿವಿಯಲ್ಲಿ ಬರುವ ನೇರ ಪ್ರಸಾರ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದ್ದು, ಲಕ್ಷಾಂತರ ಜನ ಸೇರುವ ಪರ್ಯಾಯ ಈ ಬಾರಿ ಸೀಮಿತ ಭಕ್ತರ ಸಮ್ಮುಖ ನಡೆಯಲಿದೆ.

Edited By : Manjunath H D
PublicNext

PublicNext

16/01/2022 09:30 pm

Cinque Terre

59.37 K

Cinque Terre

0

ಸಂಬಂಧಿತ ಸುದ್ದಿ