ಉಡುಪಿ: ಎಂಟು ಶತಮಾನಗಳ ಹಿಂದೆ ಮಧ್ವಾಚಾರ್ಯರಿಂದ ಸ್ಥಾಪನೆಯಾದ ಶ್ರೀಕೃಷ್ಣಮಠದಲ್ಲಿ ಮಕರ ಸಂಕ್ರಾಂತಿಯ ದಿನದಂದು ಸಂಭ್ರಮದ ಮೂರು ರಥಗಳ ಉತ್ಸವ ನಡೆಯಿತು.
ಮೊದಲು ತೆಪ್ಪೋತ್ಸವ, ನಂತರ ಪಲ್ಲಕ್ಕಿಯಲ್ಲಿ ದೇವರನ್ನು ತಂದು ಮೂರು ರಥಗಳಲ್ಲಿ ಉತ್ಸವ ಮಾಡಲಾಯಿತು. ಕೋವಿಡ್ ನಿರ್ಬಂಧಗಳ ನಡುವೆಯೇ ನೂರಾರು ಮಂದಿ ರಥೋತ್ಸವಕ್ಕೆ ಸಾಕ್ಷಿಯಾದರು. ಎಂಟು ಮಠದ ಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ಭಾಗಿಯಾದರು. ವಿದ್ಯುದ್ದೀಪಾಲಂಕಾರ, ಸಾಂಪ್ರದಾಯಿಕ ಪಟಾಕಿ, ವೈಭವದ ಮೆರವಣಿಗೆ ಸಂಕ್ರಾಂತಿಯ ಮೆರುಗನ್ನು ಹೆಚ್ಚಿಸಿತು.
ಶ್ರೀ ಕೃಷ್ಣ ಮಠದಲ್ಲಿ ನಡೆದ ಮಕರ ಸಂಕ್ರಮಣದಲ್ಲಿ ಪರ್ಯಾಯ ಅದಮಾರು ಶ್ರೀಗಳು, ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು, ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು, ಸೋದೆ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.
Kshetra Samachara
15/01/2022 08:05 am