ವಿಟ್ಲ: ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಕಾಲಾವಧಿ ಜಾತ್ರೋತ್ಸವಕ್ಕೆ ಚಾಲನೆ ನೀಡಲಾಯಿತು.
ದೇವಸ್ಥಾನದ ಅನುವಂಶೀಯ ಮೊಕ್ತೇಸರರು ವಿಟ್ಲ ಅರಮನೆಯ ಬಂಗಾರು ಅರಸರ ಉಪಸ್ಥಿತಿಯಲ್ಲಿ ಧ್ವಜಾರೋಹಣ ಜರುಗಿತು. ಇದರೊಂದಿಗೆ 9 ದಿನಗಳ ವರೆಗಿನ ಜಾತ್ರೋತ್ಸವಕ್ಕೆ ಚಾಲನೆ ನೀಡಲಾಯಿತು.
ಪ್ರತಿನಿತ್ಯ ನಿತ್ಯೋತ್ಸವ, ಜ.18ರಂದು ಕೇಪುವಿನಿಂದ ಶ್ರೀ ಮಲರಾಯ ದೈವದ ಭಂಡಾರ ಕ್ಷೇತ್ರಕ್ಕೆ ಆಗಮಿಸಿ, ಬಯ್ಯದ ಬಲಿ, ಜ.19 ರಂದು ದರ್ಶನ ಬಲಿ, ಬಟ್ಲು ಕಾಣಿಕೆ ತೆಪ್ಪೋತ್ಸವ ಜರುಗಲಿದೆ. 20ರಂದು ಉತ್ಸವದ ಬಳಿಕ ಹೂ ತೇರು, ಜ.21 ರಂದು ದರ್ಶನ ಬಲಿ, ರಾಜಾಂಗಣದ ಬಟ್ಲು ಕಾಣಿಕೆ, ರಾತ್ರಿ ಕಡಂಬುವಿನಿಂದ ಕೊಡಮಣಿತ್ತಾಯ ದೈವದ ಭಂಡಾರ ಕ್ಷೇತ್ರಕ್ಕೆ ಆಗಮಿಸಲಿದ್ದು, ಬಳಿಕ ಮಹಾ ರಥೋತ್ಸವ ನಡೆಯಲಿದೆ.
Kshetra Samachara
14/01/2022 03:56 pm