ಉಡುಪಿ : ಇದೇ ತಿಂಗಳ 17 - 18 ರಂದು ಶ್ರೀಕೃಷ್ಣಮಠದ ಸರ್ವಜ್ಞ ಪೀಠವನ್ನೇರಲಿರುವ ಕೃಷ್ಣಾಪುರ ಮಠಾಧೀಶರ ಉಡುಪಿ ಪುರಪ್ರವೇಶ ಕಾರ್ಯಕ್ರಮ ವೈಭವದಿಂದ ಸಂಪನ್ನಗೊಂಡಿತು. ಪರ್ಯಾಯ ಪೂರ್ವಭಾವಿ ತೀರ್ಥಕ್ಷೇತ್ರಯಾತ್ರೆ ಮುಗಿಸಿ ಆಗಮಿಸಿದ ಕೃಷ್ಣಾಪುರ ಶ್ರೀಗಳನ್ನು ಉಡುಪಿಯ ಜೋಡುಕಟ್ಟೆಯಿಂದ ಭವ್ಯ ಮೆರವಣಿಗೆಯಲ್ಲಿ ಕರೆತರಲಾಯಿತು. ವಿವಿಧ ಜಾನಪದ ಕಲಾ ತಂಡಗಳ ವಿವಿಧ ನಮೂನೆಯ ಕಲಾಪ್ರಕಾರಗಳು, ಮೆರವಣಿಗೆಗೆ ವಿಶೇಷ ಮೆರುಗು ನೀಡಿದವು. ಜೋಡುಕಟ್ಟೆ- ತಾಲೂಕು ಆಫೀಸ್ - ಡಯನಾ ವೃತ್ತ -ಕೆ ಎಂ ಮಾರ್ಗ- ಸಂಸ್ಕೃತ ಕಾಲೇಜು- ಕನಕದಾಸ ರಸ್ತೆಯ ಮೂಲಕ ಮೆರವಣಿಗೆ ರಥಬೀದಿ ಪ್ರವೇಶಿಸಿತು.
ವೈಭವದ ಶೋಭಾಯಾತ್ರೆಯ ಬಳಿಕ ಕನಕನ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಪಡೆದ ಶ್ರೀಗಳು, ನಂತರ ಕೃಷ್ಣ, ಅನಂತೇಶ್ವರ, ಚಂದ್ರಮೌಳೀಶ್ವರ ದೇವರ ದರ್ಶನ ಪಡೆದರು. ಇದಾದ ನಂತರ ರಥಬೀದಿಯಲ್ಲಿ ಶ್ರೀಗಳಿಗೆ ಪೌರ ಸನ್ಮಾನ ಕಾರ್ಯಕ್ರಮ ನಡೆಯಿತು.
ಪುರ ಪ್ರವೇಶ ಮೆರವಣಿಗೆ ಮತ್ತು ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಉಡುಪಿಯ ಅಷ್ಠಮಠದ ವಿವಿಧ ಪೀಠಾಧಿಪತಿಗಳು ಮತ್ತು ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಿದ್ದರು.
PublicNext
10/01/2022 05:50 pm