ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊರಗಜ್ಜನ ವೇಷ ಧರಿಸಿ ವಿಕೃತಿ: ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಬಂಟ್ವಾಳ: ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಸಾಲೆತ್ತೂರು ಎಂಬಲ್ಲಿ ಉಮರುಳ್ಳ ಬಾಷಿತ್ ಮತ್ತು ಇತರರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಟ್ಲಪಡ್ನೂರು ನಿವಾಸಿ ಚೇತನ್ ಎಂಬವರು ಈ ಕುರಿತು ವಿಟ್ಲ ಠಾಣೆಗೆ ದೂರು ನೀಡಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿ ಜಾತಿ ಅವಹೇಳನ ಮಾಡಿದ ಕುರಿತು ಬಿಜೆಪಿ ಎಸ್ಸಿ ಮೋರ್ಚಾ ವಿಟ್ಲ ಠಾಣೆಗೆ ದೂರು ನೀಡಿದ್ದು, ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಕೇಶವ ದೈಪಲ ದೂರು ನೀಡಿದ್ದಾರೆ.

ಜನವರಿ 6ರಂದು ರಾತ್ರಿ ಸುಮಾರು 10 ಗಂಟೆಯ ವೇಳೆ ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಸಾಲೆತ್ತೂರು ನಿವಾಸಿಯೊಬ್ದರ ಮಗಳ ಮದುವೆ ಸಮಾರಂಭದಲ್ಲಿ ವಧುವಿನ ಮನೆಗೆ ಕೇರಳ ರಾಜ್ಯದ ಉಪ್ಪಳದ ಸೋಂಕಳು ನಿವಾಸಿಯಾದ ಉಮರುಳ್ಳ ಬಾಷಿತ್ ಎಂಬ ವರ ಹಿಂದು ಸಮುದಾಯದವರು ಆರಾಧಿಸುವ ಕೊರಗಜ್ಜ ದೈವದ ವೇಷ ಧರಿಸಿ ಮತ್ತು ಆತನ ಸಂಗಡಿಗರು ಅಸಭ್ಯವಾಗಿ ಕುಣಿದು ಕುಪ್ಪಳಿಸುತ್ತಾ ಬಂದು ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ.

ಅಲ್ಲದೆ ಸಮಾಜದಲ್ಲಿ ಅಶಾಂತಿ ಸೃಷ್ಠಿಸುವ ಉದ್ದೇಶದಿಂದ ಅದರ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ದುಷ್ಕೃತ್ಯ ಮೆರೆದಿರುವ ಮತ್ತು ಹಿಂದೂ ಧಾರ್ಮಿಕ ಭಾವನೆಗಳಿಗೆ ಅಪಮಾನವೆಸಗಿರುವ ಕುರಿತು ದೂರು ನೀಡಲಾಗಿದ್ದು, ಅದರಂತೆ ಪ್ರಕರಣ ದಾಖಲಾಗಿದೆ.

Edited By :
Kshetra Samachara

Kshetra Samachara

07/01/2022 07:45 pm

Cinque Terre

20.77 K

Cinque Terre

4

ಸಂಬಂಧಿತ ಸುದ್ದಿ