ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊರಗಜ್ಜ ದೈವ ವೇಷ ಧರಿಸಿ ಅವಹೇಳನ:ಹಿಂದೂ-ಮುಸ್ಲಿಂ ಮುಖಂಡರಿಂದ ಕ್ರಮಕ್ಕೆ ಒತ್ತಾಯ

ಬಂಟ್ವಾಳ: ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದಲ್ಲಿ ಮದುವೆ ಸಮಾರಂಭವೊಂದರಲ್ಲಿ ಕೊರಗಜ್ಜ ದೈವದ ವೇಷಭೂಷಣ ತೊಟ್ಟು ವಿಕೃತಿ ಮೆರೆದವರ ವಿರುದ್ಧ ಹಿಂದು ಮತ್ತು ಮುಸ್ಲಿಂ ಸಮುದಾಯದ ಮುಖಂಡರ ಸಹಿತ ಹಲವರು ಇದನ್ನು ಖಂಡಿಸಿದ್ದು, ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ತುಳುನಾಡಿನ ದೈವಾರಾಧನೆಯ ಬಗ್ಗೆ ವಿಕೃತಿಯನ್ನು ಮೆರೆದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಪೋಲಿಸ್ ಇಲಾಖೆಗೆ ಸೂಚಿಸಿದ್ದಾರೆ.

ಈ ಕುರಿತು ಹಲವು ಮುಸ್ಲಿಂ ಧರ್ಮಗುರುಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳ ಮೂಲಕ ಘಟನೆಯನ್ನು ಬಲವಾಗಿ ಖಂಡಿಸಿದ್ದಾರೆ.

ಇದು ಕೇವಲ ಹಿಂದು ಸಹೋದರರ ಧಾರ್ಮಿಕ ಭಾವನೆಗೆ ಮಾಡಿದ ಚ್ಯುತಿಯಲ್ಲ, ಇಸ್ಲಾಂಗೂ ಮಾಡಿದ ಅಪಚಾರ, ಇಸ್ಲಾಂನಲ್ಲಿ ಮತ್ತೊಬ್ಬರಿಗೆ ನೋವುಂಟು ಮಾಡುವ ರೀತಿಯಲ್ಲಿ ವೇಷ ಹಾಕಿ ಕುಣಿಯುವುದು ಅಪಚಾರ. ಸ್ಥಳೀಯ ಮುಸ್ಲಿಂ ಸಜ್ಜನರು ಕೇಸು ದಾಖಲಿಸಬೇಕು ಎಂದವರು ಹೇಳಿದ್ದಾರೆ.

ಇದು ಮುಸ್ಲಿಂ ಸಮುದಾಯದ ಪವಿತ್ರ ಮದುವೆ ಕಾರ್ಯವನ್ನು ವಿಡಂಬನೆ ಮಾಡುವುದರ ಜೊತೆಗೆ ಅನ್ಯ ಸಮುದಾಯದವರ ಆರಾಧ್ಯದೈವವನ್ನು ಅವಹೇಳನೆ ಮಾಡಿದ್ದನ್ನು. ಮುಸ್ಲಿಂ ಸಮುದಾಯ ಒಪ್ಪಲು ಸಾಧ್ಯವೇ ಇಲ್ಲ ಎಂದು ಆಕ್ರೊಶ ವ್ಯಕ್ತಪಡಿಸಿದ್ದಾರೆ.

ಹಲವು ಧರ್ಮಗುರುಗಳು ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಘಟನೆಯನ್ನು ಟೀಕಿಸಿದ್ದಾರೆ. ಬಿಜೆಪಿ ಎಸ್ಸಿ ಮೋರ್ಚಾದಿಂದ ದೂರು ಕೊರಗಜ್ಜ ದೈವದ ಅಪಮಾನಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಬಿಜೆಪಿ ಎಸ್.ಸಿ ಮೋರ್ಚಾದ ಅಧ್ಯಕ್ಷ ಕೇಶವ ದೈಪಲರಿಂದ ಆರೋಪಿ ಅಜೀಜ್ ವಿರುದ್ಧ ವಿಟ್ಲ ಪೋಲಿಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ನಿಂದನೆ ದೂರು ದಾಖಲಾಗಿದೆ.

Edited By :
Kshetra Samachara

Kshetra Samachara

07/01/2022 07:39 pm

Cinque Terre

6.55 K

Cinque Terre

0

ಸಂಬಂಧಿತ ಸುದ್ದಿ