ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ನಾಡ್:ಹರಿಹರ ಕ್ಷೇತ್ರ ಅಯ್ಯಪ್ಪ ಭಕ್ತ ಸಮಿತಿ ಮಹಾಪೂಜೆ

ಮುಲ್ಕಿ: ಮುಲ್ಕಿ ಸಮೀಪದ ಕಾರ್ನಾಡು ಶ್ರೀ ಹರಿಹರ ಕ್ಷೇತ್ರ ಅಯ್ಯಪ್ಪ ಭಕ್ತ ಸಮಿತಿಯಿಂದ ವಾರ್ಷಿಕವಾಗಿ ನಡೆಸಲ್ಪಡುವ ಮಹಾಪೂಜೆಯು ಜ. 7 ಶುಕ್ರವಾರ ಹರಿಹರ ಕ್ಷೇತ್ರದ ಬಳಿಯ ಅಯ್ಯಪ್ಪಸ್ವಾಮಿ ಶಿಬಿರದಲ್ಲಿ ನಡೆಯಿತು

ಪ್ರಾತಃಕಾಲ ಶಿಬಿರದಲ್ಲಿ ವಿಶೇಷ ಪ್ರಾರ್ಥನೆ ನಡೆದು ಚಂದ್ರ ಗುರುಸ್ವಾಮಿ ಹಾಗೂ ರಮಾನಂದ ಗುರುಸ್ವಾಮಿ ನೇತೃತ್ವದಲ್ಲಿ ಇರುಮುಡಿ ಕಟ್ಟುವ ಕಾರ್ಯಕ್ರಮ ನಡೆಯಿತು.

ಬಳಿಕ ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು.ಹರಿಹರ ದೇವಸ್ಥಾನದ ಆಡಳಿತ ಮೊಕ್ತೇಸರ ಎಂ.ಎಚ್.ಅರವಿಂದ ಪೂಂಜ, ವ್ಯವಸ್ಥಾಪನಾ ಸಮಿತಿಯ ಸದಸ್ಯ ರವಿಕುಮಾರ್, ಮುಲ್ಕಿ ನಪಂ ಸದಸ್ಯ ಹರ್ಷರಾಜ ಶೆಟ್ಟಿ, ಕಾರ್ನಾಡು ಹರಿಹರ ಯುವಕ ಯುವತಿ ಮಂಡಲದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Edited By : Manjunath H D
Kshetra Samachara

Kshetra Samachara

07/01/2022 03:01 pm

Cinque Terre

5.66 K

Cinque Terre

0