ಕಟೀಲು: ಇಲ್ಲಿಗೆ ಸಮೀಪದ ಅಜಾರು ಶ್ರೀ ಧೂಮಾವತಿ ದೈವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ಜನವರಿ 3ರಂದು ರಾತ್ರಿ ವಿಶೇಷ ಪ್ರಾರ್ಥನೆ ಹಾಗೂ ಧ್ವಜಾರೋಹಣ ನಡೆಯಿತು.
ಜನವರಿ 4 ರಂದು ಮಂಗಳವಾರ ಮಧ್ಯಾಹ್ನ ಅನ್ನಸಂತರ್ಪಣೆ ಬಳಿಕ ಮೈಸಂದಾಯ ದೈವದ ನೇಮೋತ್ಸವ , ಶ್ರೀ ಧೂಮಾವತಿ ಬಂಟ ದೈವದ ನೇಮೋತ್ಸವ ವಿಜ್ರಂಭಣೆಯಿಂದ ನಡೆಯಿತು.
ಜನವರಿ 5 ಬುಧವಾರ ಸಂಜೆ ಮಾಯಿಂದಾಲ ದೈವದ ನೇಮೋತ್ಸವ ನಡೆಯಿತು.
ಈ ಸಂದರ್ಭ ಆಜಾರು ಶ್ರೀ ಧೂಮಾವತಿ ಸೇವಾ ಯುವಕ ವೃಂದ, ಮಹಿಳಾ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
05/01/2022 07:28 pm