ಮಂಗಳೂರು: ಕಲ್ಕೂರ ಪ್ರತಿಷ್ಠಾನದ ವತಿಯಿಂದ ನಗರದ ಕದ್ರಿಯಲ್ಲಿರುವ ಮಂಜು ಪ್ರಾಸಾದದಲ್ಲಿ ಉಡುಪಿ ಪರ್ಯಾಯ ಪೀಠಾರೋಹಣಗೈಯಲಿರುವ ಕೃಷ್ಣಾಪುರ ಮಠಾಧೀಶರಿಗೆ ಗುರುವಂದನಾ ಹಾಗೂ ಪಟ್ಟದ ದೇವರಿಗೆ ತುಲಾಭಾರ ಸೇವೆ ಜರುಗಿತು.
ನಾಲ್ಕನೇ ಬಾರಿಗೆ ಉಡುಪಿ ಪರ್ಯಾಯ ಪೀಠಾರೋಹಣಗೈಯಲಿರುವ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿಯರಿಗೆ ಗುರುವಂದನೆ ಕಾರ್ಯಕ್ರಮ ನಡೆಯಿತು. ಬಳಿಕ ಪಟ್ಟದ ದೇವರಿಗೆ ತುಲಾಭಾರ ಸೇವೆ ಜರುಗಿತು. ಅದೇ ರೀತಿ ಜನವರಿ 9ರಂದು ಮಂಗಳೂರಿನ ಪುರಭವನದಲ್ಲಿ ಸ್ವಾಮೀಜಿಯವರಿಗೆ ಪೌರಸನ್ಮಾನ ಕಾರ್ಯಕ್ರಮವೂ ಜರುಗಲಿದೆ.
ಈ ಸಂದರ್ಭ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿ ಮಾತನಾಡಿ, ಈ ಬಾರಿ ಓಮಿಕ್ರಾನ್, ಕೋವಿಡ್ ಸಂಕಷ್ಟಗಳಿದ್ದರೂ ಭಕ್ತರು ಉತ್ಸಾಹದಿಂದ ಪರ್ಯಾಯ ನೆರವೇರಿಸುವ ಸಂಕಲ್ಪ ಕೈಗೊಂಡಿದ್ದಾರೆ. ಹಿಂದೆ ಯಾವ ರೀತಿ ಸಂಪ್ರದಾಯದ ಪ್ರಕಾರ ಪರ್ಯಾಯ ನೆರವೇರುತ್ತಿತ್ತೋ ಅದಕ್ಕೆ ಯಾವುದೇ ರೀತಿಯ ಕುಂದು ಉಂಟಾಗದ ರೀತಿಯಲ್ಲಿ ಸರಕಾರದ ನಿಯಮವನ್ನು ಪಾಲಿಸಿಕೊಂಡು ಪರ್ಯಾಯ ನಡೆಯಲಿದೆ ಎಂದು ಹೇಳಿದರು.
Kshetra Samachara
31/12/2021 03:51 pm