ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಬ್ರಹ್ಮಾವರ ಮೂಲದ ವಂದನೀಯ ಗುರು ಆಲ್ಫ್ರೆಡ್ ರೋಚ್ ಸಂತ ಪದವಿಯತ್ತ !

ಬ್ರಹ್ಮಾವರ: ಕಪುಚಿನ್ ಸಭೆಯ ಧರ್ಮಗುರು ವಂದನೀಯ ಆಲ್ಫ್ರೆಡ್ ರೋಚ್ ಸಂತ ಪದವಿಗೆ ಹತ್ತಿರವಾಗಿದ್ದಾರೆ.ವಂದನೀಯ ಗುರು ಆಲ್ಫ್ರೆಡ್ ರೋಚ್ ಅವರ ಸಾತ್ವಿಕ ಜೀವನ ಹಾಗೂ ಜನರ ಬೇಡಿಕೆಯನ್ನು ಪರಿಗಣಿಸಿ ವ್ಯಾಟಿಕನ್‍ನ `ಸಂತರು ಮತ್ತು ಪುನೀತರನ್ನಾಗಿ ಘೋಷಿಸುವ ವಿಭಾಗ’ ವು ವಂದನೀಯ ಆಲ್ಫ್ರೆಡ್ ಗುರು ರೋಚ್‍ರನ್ನು ಪುನೀತ ಪದವಿಗೆ ಏರಿಸುವ ಪ್ರಕ್ರಿಯೆಯನ್ನು ಆರಂಭಿಸಲು ಅನುಮತಿಯನ್ನು ನೀಡಿದೆ. ಇದೊಂದು ಅತೀ ಸಂಕೀರ್ಣ ಹಾಗೂ ಬಹಳ ಕಾಲ ತಗುಲುವ ಪ್ರಕ್ರಿಯೆಯಾಗಿದ್ದು, ಕಥೋಲಿಕ ಧರ್ಮಸಭೆಯ ನಿಯಮಗಳ ಪ್ರಕಾರ ನಡೆಯಲಿದೆ.

ಈ ಪ್ರಕ್ರಿಯೆಯ ಅಂತ್ಯದಲ್ಲಿ, ಮೊದಲು ‘ಪುನೀತ’, ಅನಂತರ ಕೊನೆಯದಾಗಿ ‘ಸಂತ’ ಪದವಿಯನ್ನು ಪೋಪ್ ಜಗದ್ಗುರುಗಳು ದಯಪಾಲಿಸಲಿದ್ದಾರೆ.

ಈ ಸಂಕೀರ್ಣ ಪ್ರಕ್ರಿಯೆಯ ಪ್ರಥಮ ಹಂತವನ್ನು ವ್ಯಕ್ತಿಯು ಜೀವಿಸಿದ ಪರಿಸರದಲ್ಲಿ ನಡೆಸಲಾಗುವುದು. ವಂದನೀಯ ಗುರು ಆಲ್ಫ್ರೆಡ್ ರೋಚ್‍ರವರು ಉಡುಪಿ ಪರಿಸರದವರಾದ್ದರಿಂದ, ಉಡುಪಿ ಧರ್ಮಪ್ರಾಂತದ ಮಟ್ಟದ ಪ್ರಕ್ರಿಯೆಯು 2021 ಡಿಸೆಂಬರ್ 27 ರಂದು ಬೆಳಿಗ್ಗೆ 10 ಗಂಟೆಗೆ ಬ್ರಹ್ಮಾವರ ಪವಿತ್ರ ಕುಟುಂಬ ದೇವಾಲಯದಲ್ಲಿ ನಡೆಯುವ ದಿವ್ಯ ಬಲಿಪೂಜೆಯಲ್ಲಿ ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಜೆರಾಲ್ಡ್ ಲೋಬೊರವರು ಚಾಲನೆಯನ್ನು ನೀಡಲಿದ್ದಾರೆ.

ಧರ್ಮಗುರು ವಂದನೀಯ ಆಲ್ಫ್ರೆಡ್ ರೋಚ್ 1924 ರಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾರ್ಕೂರಿನಲ್ಲಿ ಹುಟ್ಟಿ, ಬೆಳೆದು ಕ್ರೈಸ್ತ ಧರ್ಮಗುರುವಾಗಿ ಕರ್ನಾಟಕದಾದ್ಯಂತ ಸೇವೆ ಸಲ್ಲಿಸಿ, ಬ್ರಹ್ಮಾವರದಲ್ಲೇ ಹದಿನಾರು ವರ್ಷಗಳ ಕಾಲ ಜನಸೇವೆಯಲ್ಲಿ ತೊಡಗಿ 1996 ರಲ್ಲಿ ದೈವಾಧೀನರಾದರು.

Edited By :
Kshetra Samachara

Kshetra Samachara

24/12/2021 11:15 am

Cinque Terre

14.88 K

Cinque Terre

0

ಸಂಬಂಧಿತ ಸುದ್ದಿ