ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಕ್ಷಿಕೆರೆ: "ಬಡವರಿಗೆ ದೀನ ದಲಿತರಿಗೆ ಸಹಾಯ ಹಸ್ತದ ಮೂಲಕ ರಾಷ್ಟ್ರಕ್ಕೆ ಮಾದರಿಯಾಗೋಣ

ಮುಲ್ಕಿ: ಜೀವನ ಎಂಬುದು ಶಾಶ್ವತವಲ್ಲ, ಬಡವರಿಗೆ ದೀನ ದಲಿತರಿಗೆ ಸಹಾಯ ಹಸ್ತದ ಮೂಲಕ ರಾಷ್ಟ್ರಕ್ಕೆ ಮಾದರಿಯಾಗೋಣ ಎಂದು ಪಕ್ಷಿಕೆರೆ ಚರ್ಚ್ ಧರ್ಮಗುರು ಮೆಲ್ವಿನ್ ನೊರೊಹ್ನ ಹೇಳಿದರು.

ಅವರು ಪಕ್ಷಿಕೆರೆ ಸಾರ್ವಜನಿಕ ಗಣೇಶೋತ್ಸವ ವೇದಿಕೆಯಲ್ಲಿ ಸಂತ ಜೂದರಧರ್ಮಕೇಂದ್ರ ಹಾಗೂ ಪುಣ್ಯ ಕ್ಷೇತ್ರ ಪಕ್ಷಿಕೆರೆ, ಐ.ಸಿ.ವೈ ಎಮ್, ವೈಸಿಎಸ್ ಸೈಂಟ್ ಜೂಡ್ ಎಸೋಸಿಯೇಶನ್, ಕೆಥೋಲಿಕ್ ಸಭಾ ಮತ್ತು ಅಂತರ್ ಧರ್ಮೀಯ ಸಂವಾದ ಆಯೋಗ ಪಕ್ಷಿಕೆರೆ ಚರ್ಚ್ ಆಶ್ರಯದಲ್ಲಿ ನಡೆದ ಕ್ರಿಸ್ಮಸ್ ಸೌಹಾರ್ದ ಕೂಟ 2021ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಸಂದರ್ಭ ಕೆಮ್ರಾಲ್ ಪಂಚಾಯತ್ ಅಧ್ಯಕ್ಷ ಲೀಲಾ ಕೃಷ್ಣಪ್ಪ , ಜನಪದ ವಿದ್ವಾಂಸ ಕೆ ಪೇಜಾವರ, ಪಕ್ಷಿಕೆರೆ ಚರ್ಚ್ ನ ಧರ್ಮ ಗುರು ಸ್ಟ್ಯಾನಿ ಫೆರ್ನಾಂಡಿಸ್, ಜುಮಾ ಮಸೀದಿಯ ಆಡಳಿತ ಮಂಡಳಿ ಸದಸ್ಯ ಪಿ.ಎಮ್.ಎ ಅಶ್ರಪ್ ರಾಜಾ ಅಮ್ಜಾದಿ , ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಗಣಪತಿ ಆಚಾರ್ಯ, ಕಾನ್ವೆಂಟ್ ನ ಸುಪೀರಿಯರ್ ಮಾರ್ಗರೇಟ್ , ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಜಾಕ್ಸ್ ನ್ ಸಲ್ಡಾನಾ, ಕಾರ್ಯದರ್ಶಿ ಶೈಲಾ ಡಿ ಸೋಜ, ಚೇತನ್ ರೋಡ್ರಿಗಸ್ ಮತ್ತಿತರರು ಉಪಸ್ತಿತರಿದ್ದರು.

ರಾಬಾರ್ಟ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

Edited By : Nirmala Aralikatti
Kshetra Samachara

Kshetra Samachara

23/12/2021 08:59 pm

Cinque Terre

4.65 K

Cinque Terre

0

ಸಂಬಂಧಿತ ಸುದ್ದಿ