ಮಂಗಳೂರು: ಕ್ರಿಸ್ಮಸ್ ಎಂದರೆ ದೇವರು ಮಾನವ ರೂಪದಲ್ಲಿ ಕನ್ಯಾ ಮರಿಯಮ್ಮನವರ ಮೂಲಕ ಏಸು ಕ್ರಿಸ್ತರಾಗಿ ಭೂಮಿಯಲ್ಲಿ ಜನಿಸಿದ ದಿನ. ಅವರು ನಮ್ಮನ್ನು ಪಾಪ, ಮರಣ ದ್ವೇಷ, ಹಿಂಸಾತ್ಮಕ ಮನೋಭಾವದಿಂದ ರಕ್ಷಿಸುತ್ತಾರೆ.
ಕ್ರಿಸ್ಮಸ್ ಎಲ್ಲರಿಗೂ ಸುಖ ಸಂತೋಷ ನೆಮ್ಮದಿ ಉಂಟು ಮಾಡಲಿ ಎಂದು ಮಂಗಳೂರು ಕ್ರೈಸ್ತ ಧರ್ಮಪ್ರಾಂತದ ಧರ್ಮಾಧ್ಯಕ್ಷ ಡಾ.ಪೀಟರ್ ಪಾವ್ಲ್ ಸಲ್ಡಾನ ಕರೆ ನೀಡಿದರು.
ಮಂಗಳೂರು ನಗರದ ಬಿಷಪ್ ಹೌಸ್ ನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಹಬ್ಬದ ಸಂದೇಶ ನೀಡಿದ ಅವರು, ಯೇಸು ತನ್ನ ಜೀವನದ ಆದರ್ಶದ ಮೂಲಕ ಇತರರ ವಿಚಾರದಲ್ಲಿ ಕಾಳಜಿ ವಹಿಸಲು, ಹಂಚಿ ಬಾಳಲು, ವಿರೋಧಿ ಗಳನ್ನು ಕ್ಷಮಿಸಲು, ಯಾರನ್ನೂ ದ್ವೇಷಿಸದೇ ಇರಲು ಕಲಿಸಿರುತ್ತಾರೆ. ಆದ್ದರಿಂದ ನಾವು ಉದಾಸೀನತೆಯನ್ನು ತೊರೆದು ಸ್ವಚ್ಛ ಮನಸ್ಸು, ಶುದ್ಧ ಹೃದಯದಿಂದ ಸ್ವಚ್ಛ ಭಾರತ ನಿರ್ಮಾಣಕ್ಕಾಗಿ ಗೋ ಗ್ರೀನ್ ಮೂಲಕ ಪ್ರಕೃತಿಯಲ್ಲಿ ದೇವರನ್ನು ಕಾಣುವಂತಾಗಬೇಕು ಎಂದರು.
Kshetra Samachara
23/12/2021 08:01 pm