ಉಡುಪಿ: ರಾಮಕುಂಜ ಗ್ರಾಮದಲ್ಲಿ ದಶಕಗಳ ಹಿಂದೆ ಕೀರ್ತಿಶೇಷ ಪದ್ಮವಿಭೂಷಣ ಪುರಸ್ಕೃತ ,ಯತಿ ಶ್ರೇಷ್ಠರಾದ ಶ್ರೀ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರಿಂದ ಸ್ಥಾಪಿಸಲ್ಪಟ್ಟು ಯಶಸ್ವಿಯಾಗಿ ಮುನ್ನಡೆಸಲ್ಪಡುತ್ತಿರುವ ಶ್ರೀರಾಮಕುಂಜೇಶ್ವರ ವಿದ್ಯಾ ಸಂಸ್ಥೆಗಳ ಆವರಣದಲ್ಲಿ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪುತ್ಥಳಿ ಮತ್ತು ಅವರ ಸ್ಮರಣಾರ್ಥ ನಿರ್ಮಿಸಲಾಗಿರುವ ಧ್ಯಾನಕೇಂದ್ರದ ಲೋಕಾರ್ಪಣೆ ನೆರವೇರಿತು.
ಉಡುಪಿಯ ಶ್ರೀ ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರೂ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಪುತ್ಥಳಿ ಅಮಾವರಣ ಮತ್ತು ಧ್ಯಾನಕೇಂದ್ರ ಉದ್ಘಾಟಿಸಿದರು. ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು , ಶ್ರೀ ಮಠದ ದಿವಾನರಾದ ಎಂ ರಘುರಾಮಾಚಾರ್ಯ , ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು , ಶಿಕ್ಷಕರು ಶಿಕ್ಷಕೇತರ ಸಿಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ತೀರಾ ಹಿಂದುಳಿದ ಗ್ರಾಮೀಣ ಪ್ರದೇಶವಾಗಿರುವ ರಾಮಕುಂಜದಲ್ಲಿ ಶ್ರೀಗಳು ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಈ ಹಳ್ಳಿ ಪ್ರದೇಶದ ಅಸಂಖ್ಯ ಬಡ ಮಕ್ಕಳಿಗೆ ಮಕ್ಕಳಿಗೆ ಪ್ರಾಥಮಿಕ ಪ್ರೌಢ , ಪದವಿಪೂರ್ವ ಹಾಗೂ ಪದವಿ ವರೆಗಿನ ಉತ್ತಮ ಶಿಕ್ಷಣ ಒದಗುವಂತೆ ಮಾಡಿದ್ದು , ಪ್ರಸ್ತುತ ಇಲ್ಲಿ ಎರಡೂವರೆ ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.
Kshetra Samachara
22/12/2021 06:17 pm