ಮುಲ್ಕಿ: ಭಾರತದ ಕ್ರೈಸ್ತ ಚರ್ಚುಗಳ ಒಕ್ಕೂಟ ಮಂಗಳೂರು ಹಾಗೂ ವಿಜಯ ಮಾಸ್ಟರ್ ಟ್ರಸ್ಟ್(ರಿ) ಹಳೆಯಂಗಡಿ ಸಹಯೋಗದಲ್ಲಿ ಕ್ರಿಸ್ಮಸ್ ಸೌಹಾರ್ದ ಕೂಟ, ಕಾನೂನು ಮಾಹಿತಿ ಹಾಗೂ ಅಂತರ್ ಚರ್ಚುಗಳ ಕ್ರಿಸ್ಮಸ್ ಹಾಡುಗಳ ಸ್ಪರ್ಧೆ ಹಳೆಯಂಗಡಿಯ ಕೊಳುವೈಲು ಇಂಡಿಯನ್ ಯೋಗ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತ ಕ್ರೈಸ್ತ ಚರ್ಚುಗಳ ಒಕ್ಕೂಟದ ಅಧ್ಯಕ್ಷರಾದ ಡೇನಿಯಲ್ ದೇವರಾಜ್ ವಹಿಸಿದ್ದರು.
ಕ್ರಿಸ್ಮಸ್ ಸಂದೇಶವನ್ನು ಮಂಗಳೂರು ಡಯಾಸೀಸ್ ಬಿಷಪ್ ಡಾ. ಪೀಟರ್ ಪೌಲ್ ಸಲ್ದಾನ ನೀಡಿ ಕ್ರೈಸ್ತ ತತ್ವಗಳು ಸಾಮಾನ್ಯರಲ್ಲೂ ದೇವರ ಶಕ್ತಿಯನ್ನು ಕಾಣುವ ಕತ್ತಲಿನಿಂದ ಬೆಳಕಿನೆಡೆಗೆ ಸಾಗುವ ಶುಭದಿನಗಳು ತರುತ್ತದೆ,ಸರ್ವಧರ್ಮ ಸಮನ್ವಯತೆ ಮೂಲಕ ಲೋಕದಲ್ಲಿ ಸೌಹಾರ್ದ ಹಾಗೂ ಶಾಂತಿ ನೆಲೆಸಲಿ ಎಂದು ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ವೇದಮೂರ್ತಿ ವಾದಿರಾಜ ಉಪಾಧ್ಯಾಯ ಕೊಲಕಾಡಿ ಮಾತನಾಡಿ ಜೀವನದಲ್ಲಿ ಮಾನವೀಯತೆಯ ಮೌಲ್ಯಗಳನ್ನು ಬೆಳೆಸಿಕೊಂಡು ಪರೋಪಕಾರದಿಂದ ಬದುಕು ಸಾರ್ಥಕವಾಗಲಿ ಎಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕದಿಕೆ ಕೇಂದ್ರ ಜುಮಾ ಮಸೀದಿಯ ಖತೀಬರಾದ ಪಿ. ಎ. ಅಬ್ದುಲ್ಲಝೈನಿ, ತೊಕ್ಕೊಟ್ಟು ಸಿಎಸ್ಐ ಚರ್ಚ್ ಸಭಾಪಾಲಕರಾದ ಎಡ್ವರ್ಡ್ ಎಸ್ ಕರ್ಕಡ, ಹಳೆಯಂಗಡಿ ಸಿಎಸ್ಐ ಚರ್ಚ್ ನ ವಿನಯಲಾಲ್ ಬಂಗೇರ, ಮುಲ್ಕಿ ಸಿಎಸ್ಐ ಯುನಿಟಿ ಚರ್ಚ್ ನ ಸ್ಟೀವನ್ ಸರ್ವೋತ್ತಮ, ನಿವೃತ್ತ ಸಭಾಪಾಲಕ ಐಸನ್ ಪಾಲನ್ನ, ಮುಕ್ಕ ಜ್ಯೋತಿ ಮಂದಿರದ ಮುಖ್ಯ ಧರ್ಮಗುರುಗಳಾದ ಫಾ.ಸಿರಿಲ್ ಪಿಂಟೋ, ಕದಿಕೆ ಕೇಂದ್ರ ಜುಮ್ಮಾ ಮಸೀದಿ ಮಾಜಿ ಅಧ್ಯಕ್ಷ ಶಾಹುಲ್ ಹಮೀದ್, ಸಿಸ್ಟರ್ ಮಾರ್ಗರೇಟ್, ಮತ್ತಿತರರು ಉಪಸ್ಥಿತರಿದ್ದರು.
ಕಾನೂನು ಮಾಹಿತಿಯ ಸಂಪನ್ಮೂಲ ವ್ಯಕ್ತಿಗಳಾಗಿ ವಕೀಲರಾದ ಸುಭಾಷ್ಚಂದ್ರ ಸಾಗರ್, ಪ್ರಸಾದ್ ಶೆಟ್ಟಿ ಉಡುಪಿ, ಸುರೇಂದ್ರನಾಥ ಜಿ. ಹಳೆಯಂಗಡಿ ರವರು ಜೀವನ ಕೌಶಲ್ಯ ಮತ್ತು ಕಾನೂನಿನ ಬಗ್ಗೆ ಮಾಹಿತಿ ನೀಡಿದರು.
ಒಕ್ಕೂಟದ ಕಾರ್ಯದರ್ಶಿ ಪ್ರಸನ್ನಿ ಸ್ವಾಗತಿಸಿದರು, ಜೋಶುವಾ ಡೇನಿಯಲ್ ಕಾರ್ಯಕ್ರಮ ನಿರೂಪಿಸಿದರು ಮೇರಿ ಸ್ವಪ್ನ ಧನ್ಯವಾದ ಅರ್ಪಿಸಿದರು.
ಬಳಿಕ ಕ್ರಿಸ್ಮಸ್ ಹಾಡುಗಳ ಅಂತರಕಾಲೇಜು ಗುಂಪು ಸ್ಪರ್ಧೆಯಲ್ಲಿ ವಿಜೇತರಾದ ಗೋವಿಂದ ದಾಸ ಕಾಲೇಜು ಸುರತ್ಕಲ್ ( ಪ್ರ),ಪಾಂಪೇ ಕಾಲೇಜು ಐಕಳ(ದ್ವಿ), ಸೈಂಟ್ ಆನ್ಸ್ ನರ್ಸಿಂಗ್ ಕಾಲೇಜು ಮುಲ್ಕಿಹಾಗೂ ಹಳೆಯಂಗಡಿ ಪ್ರಥಮ ದರ್ಜೆ ಕಾಲೇಜು (ತೃ) ರ ನಗದು ಪ್ರಶಸ್ತಿ ಸಹಿತ ಫಲಕ ವಿತರಿಸಲಾಯಿತು.
Kshetra Samachara
22/12/2021 02:33 pm