ಮುಲ್ಕಿ: ಇತಿಹಾಸ ಪ್ರಸಿದ್ಧ ಮುಲ್ಕಿ ಒಳಲಂಕೆ ಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿ ಪ್ರತಿಷ್ಠಾ ಹುಣ್ಣಿಮೆ ಪ್ರಯುಕ್ತ ರಥೋತ್ಸವ ವಿಜ್ರಂಭಣೆಯಿಂದ ನಡೆದು ಸಂಪನ್ನಗೊಂಡಿತು.
ಬೆಳಗ್ಗೆ ಶ್ರೀದೇವರಿಗೆ ವಿಶೇಷ ಪ್ರಾರ್ಥನೆ ನಡೆದು ಸೀಯಾಳಾಭಿಷೇಕ, ಪಂಚಾಮೃತ ಅಭಿಷೇಕ, ಕನಕಾಭಿಷೇಕ, ಗಂಗಾ ಭಾಗಿರಥಿ ಅಭಿಷೇಕ ನಡೆದು ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಸಾಯಂಕಾಲ ಮಹಾ ನೈವೇದ್ಯ, ಭೂರಿ ಸಮಾರಾಧನೆ ನಡೆಯಿತು.
ರಾತ್ರಿ ಶ್ರೀ ದೇವರಿಗೆ ವಿಶೇಷ ಪೂಜೆ ನಡೆದು ದೀಪಾರಾಧನೆ ಹಾಗೂ ಶ್ರೀ ದೇವರನ್ನು ರಥದಲ್ಲಿ ಕುಳ್ಳಿರಿಸಿ ರಥೋತ್ಸವ ನಡೆಯಿತು ಲಕ್ಷಾಂತರ ಮಂದಿ ಭಕ್ತಾದಿಗಳು ತೇರನ್ನು ಎಳೆದು ಪುನೀತರಾದರು. ಬಳಿಕ ಸುಡುಮದ್ದಿನ ಪ್ರದರ್ಶನ ನಡೆದು ದೇವರು ರಥದಿಂದ ಇಳಿದು ದೇವಸ್ಥಾನದ ಒಳಗಡೆ ವಿಶ್ರಾಂತಿ ಪೂಜೆ, ಸ್ವರ್ಣ ಗರುಡ ಸಾಹಿತ ರಜತ ರಥೋತ್ಸವ ವಸಂತ ಪೂಜೆ ನಡೆಯಿತು.
ಕೊರೆಯುವ ಚಳಿಯಲ್ಲೂ ಲಕ್ಷಾಂತರ ಭಕ್ತಾದಿಗಳು ದೇವಳಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ವಿಜಯಕುಮಾರ ಧಾರವಾಡ ರವರಿಂದ ಭಜನ್ ಸಂಧ್ಯಾ ಕಾರ್ಯಕ್ರಮ ನಡೆಯಿತು.
Kshetra Samachara
20/12/2021 01:41 pm