ಮುಲ್ಕಿ: ಮೂಲ್ಕಿಯ ಇತಿಹಾಸ ಪ್ರಸಿದ್ಧ ಒಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಭಾನುವಾರ ಶ್ರೀ ಕಾಶೀ ಮಠಾಧೀಶ ಶ್ರೀಮತ್ ಸಂಯಮೀಂದ್ರತೀರ್ಥ ಸ್ವಾಮೀಜಿಯವರ ಶುಭಾಶೀರ್ವಾದ ದೊಂದಿಗೆ ಪ್ರತಿಷ್ಠಾ ಹುಣ್ಣಿಮೆ ಮಹೋತ್ಸವ ಸಂಭ್ರಮದಿಂದ ನಡೆಯಿತು.
ಬೆಳಗ್ಗೆ 8.30 ಮಹಾ ಪ್ರಾರ್ಥನೆ ನಡೆದು ಶ್ರೀ ಉಗ್ರ ನರಸಿಂಹ ದೇವರಿಗೆ ಪಂಚಾಮೃತ ಅಭಿಷೇಕ ಹಾಗೂ ಸೀಯಾಳಾಭಿಷೇಕ ನಡೆಯಿತು.
ಮಧ್ಯಾಹ್ನ ಕನಕಾಭಿಷೇಕ ಹಾಗೂ ಗಂಗಾ ಭಾಗೀರಥಿ ಅಭಿಷೇಕ ನಡೆಯಿತು.ಸಾವಿರಾರು ಭಕ್ತಾದಿಗಳು ದೇವರ ದರ್ಶನಗೈದು ಪುನೀತರಾದರು.
ಸುಮಾರು ಒಂದು ಲಕ್ಷಕ್ಕೂ ಮಿಕ್ಕಿ ಸಿಯಾಳ ದೇವರಿಗೆ ಹರಕೆ ರೂಪದಲ್ಲಿ ಬಂದಿದ್ದು ಶ್ರೀ ದೇವರಿಗೆ ಅಭಿಷೇಕ ಮಾಡಿ ಭಕ್ತರಿಗೆ ಪ್ರಸಾದ ರೂಪದಲ್ಲಿ ವಿತರಿಸಲಾಯಿತು.
ಸಾಯಂಕಾಲ 6.30ಕ್ಕೆ ಮಹಾನೈವೇದ್ಯ, ಮಂಗಳಾರತಿ, ಭೂರಿ ಸಮಾರಾಧನೆ,ರಾತ್ರಿ 11:45 ರಿಂದ ರಾತ್ರಿ ಪೂಜೆ, ದೀಪಾರಾಧನೆ, ರಥೋತ್ಸವ, ವಿಶ್ರಾಂತಿ ಪೂಜೆ, ಸ್ವರ್ಣ ಗರುಡ ಸಹಿತ ರಜತ ರಥೋತ್ಸವ, ವಸಂತ ಪೂಜೆ, ಕಾರ್ಯಕ್ರಮಗಳು ನಡೆಯಲಿವೆ.
ಶ್ರೀ ದೇವರ ದರ್ಶನ ಪಡೆಯಲು ಭಕ್ತಾದಿಗಳಿಗೆ ಉಚಿತವಾಗಿ ವಿಶೇಷ ವಾಹನದ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನದ ಸ್ವಯಂಸೇವಕರು,ಮುಲ್ಕಿ ಪೊಲೀಸರು ಹಾಗೂ ಟ್ರಾಫಿಕ್ ಪೊಲೀಸರು ವಿಶೇಷ ಬಂದೋಬಸ್ತು ಏರ್ಪಡಿಸಿದ್ದರು.
Kshetra Samachara
19/12/2021 04:27 pm