ಸುರತ್ಕಲ್: ತಿಗಲೆ ಇತ್ತಿನಾಯಗ್ ತಿಬಾರ್ ಖ್ಯಾತಿಯ ಶಿಬರೂರು ಶ್ರೀ ಉಳ್ಳಾಯ ಮತ್ತು ಕೊಡಮಣಿತ್ತಾಯ ದ್ಯೆವಸ್ಥಾನದ ವಾರ್ಷಿಕ ನೇಮೋತ್ಸವ ಗುರುವಾರ ನಡೆಯಿತು.
ಡಿ 15 ಬುಧವಾರ ಸಂಜೆ ನವಕ ಪ್ರಧಾನ ಕಲಶಾಭಿಷೇಕ ಮಹಾಪೂಜೆ ಹಾಗೂ ರಾತ್ರಿ ಧ್ವಜಾರೋಹಣ ನಡೆಯಿತು
ಡಿ.16 ಗುರುವಾರ ಬೆಳಿಗ್ಗೆ ತುಲಾಬಾರ ಸೇವೆ ಉಳ್ಳಾಯ ದೈವದ ನೇಮೋತ್ಸವ ಕಂಚಿಲು ಸೇವೆ ಉರುಳು ಸೇವೆ, ಮದ್ಯಾಹ್ನ ಮಹಾ ಅನ್ನಸಂತರ್ಪಣೆ ರಾತ್ರಿ ಶ್ರೀ ಕೊಡಮಣಿತ್ತಾಯ ದೈವದ ನೇಮೋತ್ಸವ ಬಂಡಿ ಉತ್ಸವ ಮತ್ತಿತರರ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.
ಸಾವಿರಾರು ಮಂದಿ ಭಕ್ತರು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ಅನ್ನ ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭ ಶಿಬರೂರು ವೇದವ್ಯಾಸ ತಂತ್ರಿ, ದೈವಸ್ಥಾನದ ಗುತ್ತಿನಾರ್ ಉಮೇಶ್ ಶೆಟ್ಟಿ , ಶಿಬರೂರು ಗುತ್ತು ಕಿಟ್ಟಣ್ಣ ಆರ್.ಶೆಟ್ಟಿ, ಹೆರಿಡಿಟಿ ಟ್ರಸ್ಟಿ ಎಸ್. ವಾಸುದೇವ ಶಿಬರಾಯ,ಮೊಕ್ತೇಸರ ಪುರಂದರ ಎಂ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಶುಕ್ರವಾರ ಕಾಂತೇರಿ ಧೂಮಾವತಿ, ಶನಿವಾರ ಸರಳ ಧೂಮಾವತಿ, ಭಾನುವಾರ ಜಾರಂದಾಯ ದೈವ, ಸೋಮವಾರ ಕೈಯೂರು ಧೂಮಾವತಿ ಮತ್ತು ಮಂಗಳವಾರ ಪಿಲಿಚಾಮುಂಡಿ ದೈವದ ನೇಮೋತ್ಸವಗಳು ನಡೆದು ಧ್ವಜಾವರೋಹಣ ನಡೆಯುತ್ತದೆ.
ಶ್ರೀಕ್ಷೇತ್ರ ಕಟೀಲಿಗೂ ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರಕ್ಕೂ ಅನನ್ಯ ಸಂಬಂಧವಿದ್ದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರೆಯ ಸಂದರ್ಭ ಶ್ರೀ ಕೊಡಮಣಿತ್ತಾಯ ದೈವವು ಶ್ರೀ ಕಟೀಲಿಗೆ ಭೇಟಿ ನೀಡುವ ಕ್ರಮ ಈಗಲೂ ಮುಂದುವರಿದಿದೆ.
Kshetra Samachara
17/12/2021 10:35 am