ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಬಾರ್ಕೂರಿನಲ್ಲಿ ಗೆಂಡಸೇವೆಯಲ್ಲಿ ಪಾಲ್ಗೊಂಡ ಮಹಿಳಾ ಭಕ್ತರು

ಬಾರ್ಕೂರು: ಉಡುಪಿಯ ಬಾರ್ಕೂರಿನಲ್ಲಿರುವ ಬೆಣ್ಣೆಕುದ್ರು ಕುಲಮಾಸ್ತಿ ಅಮ್ಮನವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಗೆಂಡ ಸೇವೆ ನಡೆಯಿತು. ದೇಗುಲದ ಆವರಣದಲ್ಲಿ ನಡೆದ ಗೆಂಡ ಸೇವೆಯಲ್ಲಿ ಪಾಲ್ಗೊಂಡ ಮಹಿಳಾ ಭಕ್ತರು, ಗೆಂಡವನ್ನು ತುಳಿದು ತಮ್ಮ ಹರಕೆ ತೀರಿಸಿಕೊಂಡರು. ಕಷ್ಟ ಕಾಲದಲ್ಲಿ ಹಾಗೂ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಕರಾವಳಿ ಭಾಗದ ಮಹಿಳೆಯರು, ದೇವಿಗೆ ಗೆಂಡ ಸೇವೆ ಹರಕೆ ಹೊತ್ತು ಕೊಳ್ಳುವುದು ಇಲ್ಲಿನ ವಿಶೇಷ.ನೂರಾರು ಮಹಿಳೆಯರು ಸೇವೆಯಲ್ಲಿ ಪಾಲ್ಗೊಳ್ಳುವುದರ ಜೊತೆಗೆ, ತಮ್ಮ ಮಕ್ಕಳನ್ನು ಹಿಡಿದು ಗೆಂಡ ತುಳಿದು ಬೆಣ್ಣೆಕುದ್ರು ಕುಲಮಾಸ್ತಿ ಅಮ್ಮನವರ ಹರಕೆ ತೀರಿಸಿದರು.

Edited By : Shivu K
Kshetra Samachara

Kshetra Samachara

16/12/2021 08:13 pm

Cinque Terre

7.73 K

Cinque Terre

0

ಸಂಬಂಧಿತ ಸುದ್ದಿ