ಮುಲ್ಕಿ: ಇತಿಹಾಸ ಪ್ರಸಿದ್ಧ ಒಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಮುಕ್ಕೋಟಿ ದ್ವಾದಶಿ ಧನು ಸಂಕ್ರಮಣದ ಪ್ರಯುಕ್ತ ಬುಧವಾರ ದೇವಸ್ಥಾನದಲ್ಲಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿ ಸಂಭ್ರಮದಿಂದ ಜರುಗಿತು.
ಪ್ರಾತಃಕಾಲ ದೇವರ ಪೇಟೆ ಸವಾರಿ, ನದಿ ಸ್ನಾನ ನಡೆಯಿತು. ಬಳಿಕ ಬಿಂದುಮಾಧವ ದೇವರಿಗೆ ಅಭಿಷೇಕ, ಸಾನ್ನಿಧ್ಯ ಹವನ, ಮಧ್ಯಾಹ್ನ ಮಹಾನೈವೇದ್ಯ, ಮಂಗಳಾರತಿ ಜರುಗಿತು.ಸಂಜೆ ಭೂರಿ ಸಮಾರಾಧನೆ, ರಾತ್ರಿ ಪೂಜೆ, ದೀಪಾರಾಧನೆ, ಸಣ್ಣ ರಥೋತ್ಸವ, ನಿತ್ಯೋತ್ಸವ, ದರ್ಶನ ಸೇವೆ, ಬಂಡಿ ಗರುಡೋತ್ಸವ, ವಸಂತ ಪೂಜೆ ನಡೆಯಿತು.
ಡಿ. 19ರಂದು ದೇವಸ್ಥಾನದಲ್ಲಿ ಶ್ರೀ ಕಾಶಿ ಮಠಾಧೀಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ʼಪ್ರತಿಷ್ಠಾ ಹುಣ್ಣಿಮೆʼ ಮಹೋತ್ಸವ ನಡೆಯಲಿದೆ.
Kshetra Samachara
16/12/2021 09:57 am