ಉಡುಪಿ: ಉಡುಪಿ ರಾಜಾಂಗಣದಲ್ಲಿ ನಡೆಯುತ್ತಿರುವ 'ವಿಶ್ವಾರ್ಪಣಮ್' ಕಾರ್ಯಕ್ರಮದಲ್ಲಿ ಇವತ್ತು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಭಾಗಿಯಾಗಿದ್ದಾರೆ.
ತಮ್ಮ ಭಾಷಣದುದ್ದಕ್ಕೂ ಮತಾಂತರ ಮತ್ತು ಲವ್ ಜಿಹಾದ್ ಬಗ್ಗೆ ಪ್ರಸ್ತಾಪ ಮಾಡಿದ ಅವರು, "ಮತಾಂತರ ನಿಷೇಧ ಕಾಯಿದೆ ತರುತ್ತೇವೆ ಎಂದು ಸಿಎಂ ಹೇಳಿದ್ದಾರೆ. ವೀರಶೈವ ಮಹಾಸಭಾದವರು ಮತಾಂತರದ ವಿರುದ್ಧ ಸಣ್ಣ ಸಣ್ಣ ತಂಡ ಮಾಡಿದ್ದಾರೆ. ಮತಾಂತರದ ಅಪಾಯ ಅವರು ಗ್ರಹಿಸಿದ್ದಾರೆ.
ಸರ್ಕಾರ ಕಾನೂನು ಜಾರಿ ಮಾಡುತ್ತೆ ನಿಜ. ಆದರೆ, ಯಾವತ್ತೂ ಕಾನೂನು ಮಾತ್ರ ಪರಿಹಾರ ಅಲ್ಲ.
ಸಮಾಜ ಜಾಗರೂಕವಾಗಿದ್ರೆ ಮಾತ್ರ ಕಾನೂನು ಪ್ರಯೋಜನ. ಫಸ್ಟ್ ಜನರೇಷನ್ ಮತಾಂತರ ಆಗುತ್ತಿದೆ ಅಂದರೆ ಮನೆ ಬಾಗಿಲಿಗೆ ಬಂದಿದೆ ಎಂದರ್ಥ". ಇನ್ನು ಜನಸಂಖ್ಯೆ ಬಗ್ಗೆ ಪ್ರಸ್ತಾಪ ಮಾಡಿದ ಸಂತೋಷ್, "ಸಮಾಜದಲ್ಲಿ ಜನಸಂಖ್ಯೆಯ ಅನುಪಾತ ಗಮನಿಸಬೇಕು.
ವ್ಯತ್ಯಾಸ ಆಗ್ತಾ ಇದ್ಯಾ ನೋಡಿ? ನೆರೆಹೊರೆ ಸುರಕ್ಷಿತವಾಗಿದ್ರೆ ನಾವು ಸುರಕ್ಷಿತ" ಎಂದು ಮಾರ್ಮಿಕವಾಗಿ ಹೇಳಿದರು.
ಚುನಾವಣೆಯ ಕೆಲವು ಕ್ಷೇತ್ರಗಳಲ್ಲಿ ಮುಸಲ್ಮಾನರೇ ಗೆಲ್ತಾರೆ ಎಂದ ಅವರು, "ಗೆಲ್ಲಲಿ ಪರ್ವಾಗಿಲ್ಲ...ಆದ್ರೆ, ಬೇರೆ ಯಾರೂ ಗೆಲ್ಲೋ ಹಾಗಿಲ್ಲ ಅಂದ್ರೆ ಹೇಗೆ ? ಲವ್ ಜಿಹಾದ್ ಗೆ ನಮ್ಮ ಹೆಣ್ಣು ಮಕ್ಕಳು ಬಲಿಯಾಗುತ್ತಿದ್ದಾರೆ. ಇದು ಮನೆ ಮತ್ತು ಸಮಾಜ ಮಕ್ಕಳನ್ನು ಸರಿಯಾಗಿ ಬೆಳೆಸದ ಪರಿಣಾಮ" ಎಂದರು.
Kshetra Samachara
15/12/2021 07:46 pm