ಸುಳ್ಯ: 'ರಾಷ್ಟ್ರ ರಕ್ಷಣೆಗೆ ಸಾವಿರ ಹೆಜ್ಜೆಗಳು...' ಧ್ಯೇಯ ವಾಕ್ಯ ದೊಂದಿಗೆ ಸಾವಿರಾರು ಹಿಂದೂ ಕಾರ್ಯಕರ್ತರ ಸಂಗಮದೊಂದಿಗೆ ಸುಳ್ಯ ಪಟ್ಟಣದಲ್ಲಿ ಇಂದು 'ಶೌರ್ಯ ಸಂಚಲನ' ಮೆರವಣಿಗೆಗೆ ನಿವೃತ್ತ ಶಿಕ್ಷಕ ಕೇಶವ ಮಾಸ್ತರ್ ಹೊಸಗದ್ದೆ ಚಾಲನೆ ನೀಡಿದರು.
ಕಾರ್ಯಕ್ರಮದ ಅದ್ಯಕ್ಷತೆ ವಹಿಸಲಿರುವ ಪ್ರಭಾಕರ್ ನಾಯರ್, ಕಾರ್ಯಕ್ರಮ ಸಂಘಟಕ ಸೋಮಶೇಖರ್ ಪೈಕ, ಲತೀಶ ಗುಂಡ್ಯ ಸೇರಿದಂತೆ ಸಾವಿರಾರು ಕಾರ್ಯಕರ್ತರು, ಭಗಿನಿಯರು ಉಪಸ್ಥಿತರಿದ್ದರು.
ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ತಾಲೂಕಿನ ಮದ್ಯದಂಗಡಿಗಳನ್ನು ಬಂದ್ ಮಾಡಿಸಲಾಗಿದೆ. 5 ಗಂಟೆಗೆ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನ ವಠಾರದಲ್ಲಿ ಸಭಾ ಕಾರ್ಯಕ್ರಮ ಜರುಗಲಿದೆ.
Kshetra Samachara
13/12/2021 04:59 pm