ಪುತ್ತೂರು: ʼಕೊರೊನಾʼ ಮಹಾಮಾರಿಯಿಂದ ನಲುಗಿರುವ ವಿಶ್ವವನ್ನು ಪ್ರಕೃತಿ ಮೂಲಕ ಸಂರಕ್ಷಿಸಲು ದ.ಕ. ಜಿಲ್ಲೆಯ ಪುತ್ತೂರಿನ ಸಂಪ್ಯದ ಉದಯಗಿರಿ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಯಾಗ ನಡೆಸಲು ತೀರ್ಮಾನಿಸಲಾಗಿದೆ. ಡಿ.14ರಿಂದ 19ರ ವರೆಗೆ ಐದು ದಿನಗಳ ವರೆಗೆ ನಡೆಯುವ ಈ ಯಾಗಕ್ಕೆ "ತ್ರಿಮಧುರಪೂರಿತ ಲಕ್ಷ ನಾರಿಕೇಳ ಗಣಪತಿ ಯಾಗʼ ಎಂದು ಕರೆಯಲಾಗಿದೆ.
ಈ ಯಾಗಕ್ಕೆ 1 ಲಕ್ಷ ಒಣ ತೆಂಗಿನ ಕಾಯಿ, 750 ಕಿಲೋ ಬೆಲ್ಲ, 350 ಕಿಲೋ ತುಪ್ಪ, 300 ಕಿಲೋ ಜೇನುತುಪ್ಪವನ್ನು ಬೆಂಕಿಗೆ ಅರ್ಘ್ಯ ನೀಡುವ ಮೂಲಕ ಈ ಯಾಗವನ್ನು ಮಾಡಲಾಗುತ್ತದೆ. 1008 ಕಾಯಿಗಳ ಯಾಗವನ್ನು 20 ಕುಂಡಗಳಲ್ಲಿ ಮಾಡುವ ಮೂಲಕ ದಿನಕ್ಕೆ 20 ಸಾವಿರ ಯಾಗದಂತೆ ಐದು ದಿನಗಳಲ್ಲಿ 1 ಲಕ್ಷ ಯಾಗವನ್ನು ಮಾಡಲು ತೀರ್ಮಾನಿಸಲಾಗಿದೆ.
ಅಲ್ಲದೆ, ಯಾಗದ ಕೊನೆ ದಿನ 1008 ತೆಂಗಿನ ಕಾಯಿಯ ಅಷ್ಟದ್ರವ್ಯ ಗಣಪತಿ ಹೋಮ ನಡೆಸುವ ಮೂಲಕ ಯಾಗವನ್ನು ಸಮಾಪ್ತಿ ಮಾಡಲಾಗುತ್ತದೆ. 125 ಮುಖ್ಯ ವೈದಿಕರು ಸೇರಿ ಈ ಯಾಗ ಮಾಡಲಿದ್ದು, ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಯಾಗದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಯಾಗದ ನೇತೃತ್ವ ವಹಿಸಿರುವ ಪ್ರೀತಂ ಪುತ್ತೂರಾಯ ತಿಳಿಸಿದ್ದಾರೆ.
Kshetra Samachara
13/12/2021 03:25 pm