ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಕಾರ್ಕಳ ಹಿಂದೂ ಸಂಘಟನೆಗಳ ಮುಂದಾಳುತ್ವದಲ್ಲಿ ಬೃಹತ್ ಹಿಂದೂ ಸಂಗಮ

ಕಾರ್ಕಳ: ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ನೇತೃತ್ವದಲ್ಲಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಬೃಹತ್ ಹಿಂದೂ ಸಂಗಮ ಕಾರ್ಯಕ್ರಮ ಭಾನುವಾರ ಸಂಜೆ ನಡೆಯಿತು. ಸಾವಿರಾರು ಜನ ಈ ಕಾರ್ಯಕ್ರಮದಲ್ಲಿ ಭಾಗಿಯಾದರು. ಸಭಾ ಕಾರ್ಯಕ್ರಮಕ್ಕೂ ಮೊದಲು ಕಾರ್ಕಳದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು.

ಸಾಧ್ವಿ ಸರಸ್ವತಿ ದಿಕ್ಸೂಚಿ ಭಾಷಣಕಾರರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕರಾವಳಿಯ ಹಿಂದೂ ಸಂಘಟನೆಗಳ ಪ್ರಮುಖರು ,ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ಕಾರ್ಕಳದ ಸ್ವರಾಜ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದರು.ಮುಖ್ಯವಾಗಿ ಸಮಾವೇಶದಲ್ಲಿ ನಡೆದ ಪ್ರಮುಖ ಭಾಷಣಗಳು, ಗೋಹತ್ಯೆ‌ ಮತ್ತು ಮತಾಂತರ ಮುಂತಾದ ವಿಷಯಗಳಿಗೆ ಕೇಂದ್ರೀಕೃತವಾಗಿತ್ತು. ಮೆರವಣಿಗೆ ಮತ್ತು ಸಮಾವೇಶಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

Edited By : Shivu K
Kshetra Samachara

Kshetra Samachara

13/12/2021 11:37 am

Cinque Terre

9.45 K

Cinque Terre

1