ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿಲೆಂಜೂರು: ಸಂಭ್ರಮದ ವಾರ್ಷಿಕ ನೇಮೋತ್ಸವ

ಮುಲ್ಕಿ: ಕಿನ್ನಿಗೋಳಿ ಸಮೀಪದ ಕಿಲೆಂಜೂರು ಸರಳ ಧೂಮಾವತಿ ದೈವಸ್ಥಾನದಲ್ಲಿ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು.

ಶುಕ್ರವಾರ ಪ್ರಾತಃಕಾಲ ಪುಣ್ಯಾರ್ಚನೆ, ಹಾಗೂ ಶುದ್ದಿ ಕಲಶ ಸಂಜೆ ಗರ್ಭಗುಡಿಗೆ ಶ್ರೀ ದೈವಗಳ ಭಂಡಾರ ಆಗಮನ ಬಳಿಕ ಶ್ರೀ ದೈವಗಳಿಗೆ ಚೌತಿಹಬ್ಬ ನಡೆಯಿತು.

ಶನಿವಾರ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆದು ರಾತ್ರಿ ಗರ್ಭಗುಡಿಯಿಂದ ಕೊಡಿಯಡಿಗೆ ಭಂಡಾರ ಆಗಮನ ಪ್ರಕ್ರಿಯೆಗಳು ನಡೆದು ಶ್ರೀ ಬಂಟ ಧೂಮಾವತಿ ದೈವಗಳ ನೇಮೋತ್ಸವ ವಿಜ್ರಂಭಣೆಯಿಂದ ನಡೆಯಿತು.

ಈ ಸಂದರ್ಭ ಅತ್ತೂರುಬೈಲ್ ವೆಂಕಟರಾಜ ಉಡುಪ, ಅನುವಂಶಿಕ ಆಡಳಿತ ಮೊಕ್ತೇಸರ ವಿಶ್ವನಾಥ ಕೆ ಶೆಟ್ಟಿ ಕುಡ್ತಿಮಾರ್ ಗುತ್ತು ಮತ್ತಿತರರು ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

12/12/2021 10:08 pm

Cinque Terre

14.78 K

Cinque Terre

0

ಸಂಬಂಧಿತ ಸುದ್ದಿ