ಉಡುಪಿ; ಕರಾವಳಿಯ ಜನರು ದೈವರಾಧನೆಯಲ್ಲಿ ವಿಶೇಷ ನಂಬಿಕೆ, ಭಕ್ತಿ ಉಳ್ಳವರು. ಸದ್ಯ ಉಡುಪಿ ಜಿಲ್ಲೆಯಾದ್ಯಂತ ನೇಮೋತ್ಸವಗಳು ಆರಂಭವಾಗಿದ್ದು, ರಾತ್ರಿ ವೇಳೆಯಲ್ಲಿ ಹೆಚ್ಚಿನ ದೇವಸ್ಥಾನಗಳಲ್ಲಿ ದೈವಗಳ ನೇಮಗಳು ನಡೆಯುತ್ತಿವೆ. ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯರ ದೈವಗಳ ನೇಮೋತ್ಸವ ಗರಡಿಗಳಲ್ಲಿ ನಡೆಯುತ್ತಿವೆ. ಅಲ್ಲದೇ, ಬಬ್ಬು ಸ್ವಾಮಿ, ಅಣ್ಣಪ್ಪ ಪಂಜುರ್ಲಿ, ಗುಳಿಗ ದೈವಗಳ ನೇಮಗಳು ಕೂಡ ಜಿಲ್ಲೆಯಾದ್ಯಂತ ಅದ್ದೂರಿಯಾಗಿ ನಡೆಯುತ್ತಿವೆ.ದೈವರಾಧಕರು ನೇಮೋತ್ಸವದಲ್ಲಿ ಭಾಗಿಯಾಗಿ ಪುನೀತರಾಗುತ್ತಿದ್ದಾರೆ.ಉಡುಪಿಯಲ್ಲಿ ಇಂದು ಕಂಡು ಬಂದ ಭೂತ ಕೋಲದ ದೃಶ್ಯ ಆಸ್ತಿಕರ ಗಮನ ಸೆಳೆಯಿತು.
Kshetra Samachara
11/12/2021 09:52 pm