ಮುಲ್ಕಿ: ಹಳೆಯಂಗಡಿ ಸಮೀಪದ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವರ್ಷಾವಧಿ ಷಷ್ಠಿ ಮಹೋತ್ಸವ ಪ್ರಯುಕ್ತ ಶುಕ್ರವಾರ ರಾತ್ರಿ 'ರಥೋತ್ಸವ' ವೇದಮೂರ್ತಿ ಶಿಬರೂರು ಶ್ರೀಗೋಪಾಲಕೃಷ್ಣ ತಂತ್ರಿ, ಅರ್ಚಕ ಮಧುಸೂದನ ಆಚಾರ್ಯ ನೇತೃತ್ವದಲ್ಲಿ ಜರುಗಿತು.
ಶುಕ್ರವಾರ ಬೆಳಗ್ಗೆ ಕವಾಟೋದ್ಘಾಟನೆ, ತುಲಾಭಾರ ಸೇವೆ,ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಿತು.ರಾತ್ರಿ ದೇವರ ಉತ್ಸವ ಬಲಿ, ಓಕುಳಿ, ರಥೋತ್ಸವ ನಡೆಯಿತು. ಸಾವಿರಾರು ಭಕ್ತಾದಿಗಳು ರಥ ಎಳೆದು ಧನ್ಯತಾ ಭಾವ ಅನುಭವಿಸಿದರು.
ಬಳಿಕ ಸುಡುಮದ್ದು ಪ್ರದರ್ಶನ, ಕಟ್ಟೆ ಪೂಜೆ, ಜಳಕದ ಬಲಿ, ಧ್ವಜಾವರೋಹಣ, ಮಹಾಪೂಜೆ ನಡೆದು ಪ್ರಸಾದ ವಿತರಿಸಲಾಯಿತು.
ಇಂದು ಸಂಪ್ರೋಕ್ಷಣೆ ಮಹಾಪೂಜೆ, ಮಂತ್ರಾಕ್ಷತೆ ಜರುಗಲಿದೆ.ಜ. 7ರಂದು ಪಂಚಮಿ ಉತ್ಸವ, ಜ. 8ರಂದು ಕಿರು ಷಷ್ಠಿ ಉತ್ಸವ, ಚಂಡಿಕಾಯಾಗ ನಡೆಯಲಿದೆ.
Kshetra Samachara
11/12/2021 10:30 am