ಮುಲ್ಕಿ: ಕಿನ್ನಿಗೋಳಿ ಬಳಿಯ ಕೊಡೆತ್ತೂರು ಶ್ರೀ ಅರಸು ಕುಂಜರಾಯ ದೈವಸ್ಥಾನದಲ್ಲಿ ಡಿ.25ರಂದು ನಡೆಯುವ ಕೆಂಡಸೇವೆ ಬ್ಯಾನರ್ ನ್ನು ಕಿನ್ನಿಗೋಳಿ ಬಸ್ಸು ನಿಲ್ದಾಣದ ವೃತ್ತ ಬಳಿ ಅಳವಡಿಸಿದ್ದು, ಕಿನ್ನಿಗೋಳಿ ಪಟ್ಟಣ ಪಂಚಾಯತ್ ತೆರವುಗೊಳಿಸಿದ್ದನ್ನು ವಿರೋಧಿಸಿ ಕೊಡೆತ್ತೂರು ಗ್ರಾಮಸ್ಥರು ಇಂದು ಪಟ್ಟಣ ಪಂ. ಮುಖ್ಯಾಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ತಹಸೀಲ್ದಾರ್ ಗೆ ಮನವಿ ಸಲ್ಲಿಸಿದರು.
ಧಾರ್ಮಿಕ ಕ್ಷೇತ್ರದ ಬ್ಯಾನರ್ ಪ್ರತಿವರ್ಷ ಅಳವಡಿಸುತ್ತಿದ್ದೇವೆ. ತೆರವುಗೊಳಿಸಿದ್ದು ಧಾರ್ಮಿಕ ಭಾವನೆಗೆ ನೋವು ತಂದಿದೆ.
ಬ್ಯಾನರ್ ತೆರವುಗೊಳಿಸಿದ ಮುಖ್ಯಾಧಿಕಾರಿಯನ್ನು ತಕ್ಷಣ ವರ್ಗಾವಣೆ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ದೈವಸ್ಥಾನದ ಜಯರಾಮ ಮುಕಾಲ್ದಿ, ವೇದವ್ಯಾಸ ಉಡುಪ, ದೇವಿಪ್ರಸಾದ್ ಕೊಡೆತ್ತೂರು, ಭುವನಾಭಿರಾಮ ಉಡುಪ, ಪುರುಷೋತ್ತಮ ಶೆಟ್ಟಿ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Kshetra Samachara
09/12/2021 04:39 pm