ಪುತ್ತೂರು: ಕಾರ್ತಿಕ ಮಾಸದ ಸಂಭ್ರಮ ಎಲ್ಲೆಡೆ ಪಸರಿಸಿದೆ. ದೇವಾಲಯಗಳಲ್ಲಿ ಕಾರ್ತಿಕ ದೀಪೋತ್ಸವ ನಡೆಯುತ್ತಿದ್ದು, ಭಕ್ತರು ದೀಪ ಬೆಳಗುವ ಮೂಲಕ ಖುಷಿಯಿಂದ ಆಚರಿಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಇತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಒಳಾಂಗಣ ಹಾಗೂ ಹೊರಾಂಗಣದಲ್ಲಿ ಸಾವಿರಾರು ಮಂದಿ ಭಕ್ತರು ಹಣತೆ ಬೆಳಗಿಸಿ ಸಂಭ್ರಮಿಸಿದರು.
ಇನ್ನು, ಕಾರ್ತಿಕ ಮಾಸದ ಹಿನ್ನೆಲೆಯಲ್ಲಿ ದೇವರಿಗೆ ವಿಶೇಷ ಉತ್ಸವ, ಪೂಜಾದಿ ನಡೆಯಿತು. ದೇವಾಲಯದ ದ್ವಾರ ಹಾಗೂ ಪ್ರಾಕಾರಗುಡಿಗಳನ್ನು ಮಾವಿನೆಲೆಯ ತಳಿರುತೋರಣ, ರಾಜಗೋಪುರವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ಈ ನಡುವೆ ಭಕ್ತರು ರಥ ಬೀದಿಗಳಲ್ಲಿ ಬೆಳಗಿದ ಹಣತೆ ದೀಪಗಳ ಬೆಳಕು ಕಂಗೊಳಿಸುತ್ತಿತ್ತು. ಚೆಂಡೆ, ವಾದ್ಯಗೋಷ್ಠಿ, ಡೋಲು ವಾದನದೊಂದಿಗೆ ಚಂದ್ರಮಂಡಲ ರಥೋತ್ಸವ, ತೆಪ್ಪೋತ್ಸವ ನೆರವೇರಿತು. ದೇವಾಲಯದ ಕೆರೆ ಸುತ್ತಲೂ ಹಣತೆ ದೀಪಗಳ ಸೊಬಗು ಆಕರ್ಷನೀಯವಾಗಿತ್ತು.
Kshetra Samachara
05/12/2021 12:23 pm