ಮಂಗಳೂರು: ನಗರದ ಅಡ್ಯಾರ್ ಕಣ್ಣೂರು ಜುಮಾ ಮಸೀದಿ ವಠಾರದಲ್ಲಿ ಹಝ್ರತ್ ಶೈಖ್ ಯೂಸುಫ್ ಸಿದ್ದೀಕ್ ವಲಿಯುಲ್ಲಾಹಿ ಅವರ ಹೆಸರಿನಲ್ಲಿ ಮೂರು ವರ್ಷಕ್ಕೊಮ್ಮೆ ನಡೆಯುವ ಉರೂಸ್ ಸಮಾರಂಭ ಡಿ.16ರಿಂದ 19ರವರೆಗೆ ನಡೆಯಲಿದೆ.
ಮೂರೂ ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ಉರೂಸ್ ಸಮಾರಂಭ ನಡೆಯಲಿದೆ. ಡಿ.16ರಂದು ಸಂಜೆ 7ಕ್ಕೆ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಅಂದು ಪ್ರಖ್ಯಾತ ವಾಗ್ಮಿ ಬಹು ಅಬೂಬಕ್ಕರ್ ಹುದವಿಯವರು ಪ್ರಭಾಷಣ ಮಾಡಲಿದ್ದಾರೆ. ಮರುದಿನ ಪದ್ಮಶ್ರೀ ಪ್ರಶಸ್ತಿ ವಿಜೇತ ಹರೇಕಳ ಹಾಜಬ್ಬನವರಿಗೆ ಸನ್ಮಾನಿಸಲಾಗುತ್ತದೆ.
ಡಿ.18ರಂದು ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು, ಅಂದು ಹಲವಾರು ಧಾರ್ಮಿಕ ಉಲಮಾ-ಉಮರಾಗಳು ಪ್ರಭಾಷಣಗೈಯಲಿದ್ದಾರೆ. ಡಿ.19ರಂದು ಹಗಲು ಹೊತ್ತು ಉರೂಸ್ ಕಾರ್ಯಕ್ರಮ ಇರಲಿದೆ ಎಂದು ಕಣ್ಣೂರು ಬದ್ರಿಯಾ ಜುಮಾ ಮಸೀದಿಯ ಖತೀಬ್ ಬಹು ಅನ್ಸಾರ್ ಫೈಝಿ ಬುರ್ಹಾನಿ ಹೇಳಿದರು.
Kshetra Samachara
04/12/2021 02:45 pm