ಮುಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ ಹಾಗೂ ಉತ್ಸವ ಬಲಿ ವಿಜೃಂಭಣೆಯಿಂದ ಜರುಗಿತು.
ದೇವಸ್ಥಾನದಲ್ಲಿ ನಿನ್ನೆ ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಿತು. ಸಾಯಂಕಾಲ ಯುವಕ ವೃಂದ ವತಿಯಿಂದ ಭಜನಾ ಸಂಕೀರ್ತನೆ, ಅರ್ಚಕ ಶ್ರೀಪತಿ ಉಪಾಧ್ಯಾಯ ನೇತೃತ್ವದಲ್ಲಿ ದುರ್ಗಾ ನಮಸ್ಕಾರ ಪೂಜೆ, ಶ್ರೀದೇವರಿಗೆ ಸಣ್ಣ ರಂಗಪೂಜೆ ಬಳಿಕ ಬಲಿ ಹೊರಟು ದೀಪೋತ್ಸವ ಹಾಗೂ ಉತ್ಸವ ಬಲಿ ನಡೆಯಿತು.
ಈ ಸಂದರ್ಭ ದೇವಸ್ಥಾನ ಅರ್ಚಕ ನರಸಿಂಹ ಭಟ್, ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತರು, ನಾಗಸ್ವರ ವಾದಕ ನಾಗೇಶ್ ಬಪ್ಪನಾಡು, ಜಯ ಶೆಟ್ಟಿ ಮುಂಬೈ, ಗೋಪಾಲಕೃಷ್ಣ ಭಟ್ ಬಪ್ಪನಾಡು, ಎಂ.ಶಿವಶಂಕರ್ , ಬಪ್ಪನಾಡು ಯುವಕ ವೃಂದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
04/12/2021 10:00 am