ಮಂಗಳೂರು: ಯೋಗಗುರು ಡಾ. ಜಗದೀಶ್ ಶೆಟ್ಟಿ ಬಿಜೈ ಅವರ ನೇತೃತ್ವದಲ್ಲಿ ಯೋಗ ಶಿಬಿರಾರ್ಥಿಗಳಿಂದ ಅಭಿನಂದನೆ ಸಮಾರಂಭ ನಡೆಯಿತು.
ಗೌರವ ಸ್ವೀಕರಿಸಿ ಮಾತನಾಡಿದ ಶ್ರೀರಾಮಕೃಷ್ಣ ಮಠದ ಅಧ್ಯಕ್ಷ ಶ್ರೀ ಜಿತಕಾಮಾನಂದ ಸ್ವಾಮೀಜಿ, ಇಂದು ಪ್ರಪಂಚಾದ್ಯಂತ ಜನರು ಯೋಗದತ್ತ ತಮ್ಮ ಒಲವನ್ನು ತೋರಿಸುತ್ತಿರುವ ಕಾಲಘಟ್ಟದಲ್ಲಿ ಯೋಗಗುರು ಜಗದೀಶ್ ಶೆಟ್ಟಿಯವರು 200ಕ್ಕೂ ಹೆಚ್ಚು ಉಚಿತ ಯೋಗ ಶಿಬಿರಗಳನ್ನು ಆಯೋಜಿಸಿ, ಜನರ ಸ್ವಾಸ್ಥ್ಯ ಕಾಪಾಡುವ ಕಾರ್ಯ ಶ್ಲಾಘನೀಯ ಎಂದರು. ಸಮಾಜ ಸೇವೆಯಲ್ಲಿ ಆಧ್ಯಾತ್ಮಿಕತೆ ಸ್ಪರ್ಶವಿದ್ದಲ್ಲಿ ಯಶಸ್ಸು ಶೀಘ್ರ ಸಿಗುವುದು. ನಮ್ಮ ಚಿತ್ತ ಪ್ರಕೃತಿಯತ್ತ, ಮರಗಿಡಗಳ ಸಂರಕ್ಷಣೆಯತ್ತ, ಸ್ವಚ್ಛ ಮನಸ್ಸು ಸ್ವಚ್ಛ ಭಾರತದತ್ತ... ಇದ್ದಲ್ಲಿ ಅದುವೇ ನಾವು ಪ್ರಕೃತಿ ಮಾತೆಗೆ ಮಾಡುವ ಮಹಾಪೂಜೆ ಎಂದರು.
ಎನ್ ಎಂಪಿಟಿ ನಿವೃತ್ತ ಅಧಿಕಾರಿ ಪಿ. ಸುಧಾಕರ್ ಕಾಮತ್ ಅಭಿನಂದನೆ ನುಡಿಗಳನ್ನಾಡಿದರು. ಈ ಸಂದರ್ಭ ಶಿಬಿರಾರ್ಥಿಗಳ ವತಿಯಿಂದ ಯೋಗಗುರು ಡಾ ಎಂ. ಜಗದೀಶ್ ಶೆಟ್ಟಿ ಬಿಜೈ ಅವರನ್ನು ಸ್ವಾಮೀಜಿ ಗೌರವಿಸಿದರು.
ಚಿಲಿಂಬಿ ಬಾಲಕರ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಟ್ರಸ್ಟಿನ ಅಧ್ಯಕ್ಷ ಎಸ್. ಸುಬ್ರಾಯ ನಾಯಕ್, ಸಹಶಿಕ್ಷಕಿಯರಾದ ಭಾರತಿ ಶೆಟ್ಟಿ, ರಾಧಿಕಾ ಕಾಮತ್, ಊರ್ಮಿಳಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
01/12/2021 03:12 pm