ಮುಲ್ಕಿ: ಮುಲ್ಕಿ ಸಮೀಪದ ಪಂಜಿನಡ್ಕ ಶ್ರೀ ವಿಠೋಭಾ ರುಕುಮಾಯಿ ಭಜನಾ ಮಂದಿರದ ವರ್ಷಾವಧಿ ಭಜನಾ ಮಹೋತ್ಸವ ಹಾಗೂ ಮಂಗಲೋತ್ಸವ ನ.21ರಿಂದ ನ.27ರ ವರೆಗೆ ಜರುಗಿತು.
ನ.21ರಂದು ಪ್ರಾತಃಕಾಲ ಕೊಲಕಾಡಿ ವೇದಮೂರ್ತಿ ವಾದಿರಾಜ ಉಪಾಧ್ಯಾಯ ಅವರ ಮಾರ್ಗದರ್ಶನದಲ್ಲಿ ಗಣಹೋಮ, ಸಾನ್ನಿಧ್ಯ ಕಲಶಾಭಿಷೇಕ, ಅಶ್ವಥ ಪೂಜೆ, ಹಾಗೂ ಕಲಶ ಪ್ರತಿಷ್ಠೆ ನಡೆದು, ವರ್ಷಾವಧಿ ಭಜನಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.
ಇಂದು ಭಜನಾ ಮಂಗಲೋತ್ಸವದ ಪ್ರಯುಕ್ತ ವಿವಿಧ ಭಜನಾ ಮಂಡಳಿಗಳಿಂದ ಭಜನೆ ಹಾಗೂ ದೇವರಿಗೆ ವಿಶೇಷ ಪೂಜೆ ನಡೆದು, ಭಕ್ತರಿಗೆ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಜರುಗಿತು.
ಈ ಸಂದರ್ಭ ಶಾಸಕ ಉಮಾನಾಥ ಕೋಟ್ಯಾನ್, ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ, ಅತಿಕಾರಿಬೆಟ್ಟು ಗ್ರಾಪಂ ಅಧ್ಯಕ್ಷ ಮನೋಹರ ಕೋಟ್ಯಾನ್, ದಿನೇಶ್ಚಂದ್ರ ಅಜಿಲ, ಹರೀಶ್ ಶೆಟ್ಟಿ, ಅನಿಲ್ ಕೊಲಕಾಡಿ, ಮಾಲತಿ ಸುವರ್ಣ, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
27/11/2021 11:01 pm