ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ದುರ್ಗಾ ಬೆಟ್ಟದಲ್ಲಿ ಲಕ್ಷ ದೀಪೋತ್ಸವ ವೈಭವ; ದೇವರಿಗೆ ವಿಶೇಷ ಪೂಜೆ ಸಂಪನ್ನ

ಕುಂಜಾರುಗಿರಿ: ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಪಾಜಕ ಸಮೀಪದ ದುರ್ಗಾ ಬೆಟ್ಟದಲ್ಲಿ ಉತ್ಥಾನ ದ್ವಾದಶಿ ಆಚರಣೆ ವಿಜೃಂಭಣೆಯಿಂದ ನಡೆಯುತ್ತಿದೆ. ಪರಶುರಾಮ ಸೃಷ್ಟಿ ಎಂದೇ ಪ್ರತೀತಿ ಇರುವ ಸುಮಾರು 5 ಸಾವಿರ ವರ್ಷಗಳ ಇತಿಹಾಸವಿರುವ ಕುಂಜಾರು ಶ್ರೀ ದುರ್ಗಾ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಆಚರಣೆ ನಡೆಸಲಾಯಿತು.

ದೇವಸ್ಥಾನದ ಪ್ರಾಂಗಣ, ಗರ್ಭಗುಡಿ, ತೀರ್ಥ ಮಂಟಪ ಹೀಗೆ ಸಂಪೂರ್ಣ ದೇವಸ್ಥಾನವನ್ನು ದೀಪಗಳಿಂದ ಸಿಂಗಾರ ಮಾಡಲಾಗಿದೆ. ದಿನಕ್ಕೆ ಇಪ್ಪತ್ತೈದು ಸಾವಿರ ಹಣತೆಗಳನ್ನು ಬೆಳಗಿ ದೇವರಿಗೆ ವಿಶೇಷ ಪೂಜೋತ್ಸವ ನಡೆಯುತ್ತಿದೆ. ಪರ್ಯಾಯ ಅದಮಾರು ಮಠಕ್ಕೆ ಶ್ರೀದುರ್ಗಾದೇವಿ ದೇವಸ್ಥಾನ ಒಳಪಡುತ್ತಿದ್ದು, ಒಂದು ಲಕ್ಷ ಹಣತೆಗಳನ್ನು ಬೆಳಗಿ ದೀಪೋತ್ಸವ ಆಚರಿಸಲಾಗುತ್ತಿದೆ.

ಹಣತೆ ದೀಪದ ಬೆಳಕಿನಲ್ಲಿ ದೇವರ ದರ್ಶನವಾದರೆ ವಿಶೇಷವಾದ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ದೀಪೋತ್ಸವ ಹಿನ್ನೆಲೆಯಲ್ಲಿ ದೇವರ ರಥೋತ್ಸವ, ಬಲಿ ಉತ್ಸವ ಹಾಗೂ ನೂರಾರು ಭಕ್ತರಿಂದ ಕುಣಿತ ಭಜನೆ ನಡೆಯಿತು.

Edited By : Manjunath H D
Kshetra Samachara

Kshetra Samachara

20/11/2021 09:03 pm

Cinque Terre

26.34 K

Cinque Terre

0

ಸಂಬಂಧಿತ ಸುದ್ದಿ