ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕುಡುಪು ಶ್ರೀ ಅನಂತಪದ್ಮನಾಭ ಕ್ಷೇತ್ರದಲ್ಲಿ ಪುನಃ ಪ್ರತಿಷ್ಠಾ ಮಹೋತ್ಸವ

ಮಂಗಳೂರು: ನಗರದ ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ನವೀಕೃತ ಶಿಲಾಮಯ ಅಷ್ಟಕುಲ ನಾಗಮಂಟಪದಲ್ಲಿ ಶ್ರೀ ವಾಸುಕೀ ಪುನಃ ಪ್ರತಿಷ್ಠಾ ಮಹೋತ್ಸವ ವೈದಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು.

ಇಂದು ಪ್ರಾತಃ ಕಾಲ 7 ಗಂಟೆಯಿಂದ ಪ್ರತಿಷ್ಠಾ ಹೋಮ ಆರಂಭಗೊಂಡಿತು.

ಬೆಳಗ್ಗೆ ಧನುಲಗ್ನ ಸುಮುಹೂರ್ತದಲ್ಲಿ ಶ್ರೀ ವಾಸುಕಿ ನಾಗರಾಜ ದೇವರ ಪುನಃ ಪ್ರತಿಷ್ಠೆ, ಮಹಾ ಪಂಚಾಮೃತಾಭಿಷೇಕ, ಪರಿಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ, ಪ್ರಸನ್ನ ಪೂಜೆ ನಡೆದು, ಪ್ರಸಾದ ವಿತರಣೆ ನಡೆಯಿತು.

ವಾಸುಕಿ ನಾಗರಾಜ ದೇವರಿಗೆ ಕಲ್ಪೋಕ್ತ ಪೂಜೆ, ವಟು ಆರಾಧನೆ, ಬ್ರಾಹ್ಮಣಾರಾಧನೆ, ಪಲ್ಲಪೂಜೆ ನಡೆದು ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು. ಸಂಜೆ 5ರಿಂದ 7 ಗಂಟೆವರೆಗೆ ಏಕಕಾಲದಲ್ಲಿ ಅಷ್ಟ ಚತ್ಪಾರಿಂಶತ್‌ ಅಶ್ಲೇಷಾ ಬಲಿ- ಪ್ರಸನ್ನ ಪೂಜೆ ನಡೆಯಿತು.

Edited By : Nagesh Gaonkar
Kshetra Samachara

Kshetra Samachara

17/11/2021 10:40 pm

Cinque Terre

18.71 K

Cinque Terre

0

ಸಂಬಂಧಿತ ಸುದ್ದಿ