ಉಡುಪಿ: ಉಡುಪಿಯ ಶೋಕಮಾತಾ ಇಗರ್ಜಿಯ ವಾರ್ಷಿಕ ಮಹೋತ್ಸವ ವಿಜೃಂಭಣೆಯಿಂದ ಸಂಪನ್ನಗೊಂಡಿತು.
ವಾರ್ಷಿಕ ಮಹೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಚರ್ಚಿನಲ್ಲಿ ವಿಶೇಷ ಬಲಿಪೂಜೆ, ಪ್ರಾರ್ಥನೆ ಜರುಗಿತು. ಕ್ರೈಸ್ತ ಬಾಂಧವರು ಚರ್ಚಿಗೆ ಆಗಮಿಸಿ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.
ಉಡುಪಿ ವಲಯ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ ಪ್ರಾರ್ಥನೆ ನೆರವೇರಿಸಿದರು.
ಚರ್ಚ್ ಧರ್ಮಗುರು ಚಾರ್ಲ್ಸ್ ಮಿನೇಜಸ್, ಫಾದರ್ ವಿಲಿಯಂ ಮಾರ್ಟಿಸ್ ಮುಂತಾದ ಧರ್ಮಗುರುಗಳು ಪ್ರಾರ್ಥನಾ ವಿಧಿ ವಿಧಾನಗಳಲ್ಲಿ ಪಾಲ್ಗೊಂಡರು.
Kshetra Samachara
10/11/2021 05:43 pm