ಬಂಟ್ವಾಳ: ಅಮ್ಟೂರಿನ ಶ್ರೀಕೃಷ್ಣಮಂದಿರದ ನೂತನ ಸಮಿತಿಯ ಆಯ್ಕೆ ನಡೆದಿದ್ದು, ರಮೇಶ್ ಕರಿಂಗಾಣ ಅಧ್ಯಕ್ಷರಾಗಿ ಆಯ್ಕೆಗೊಂಡರು. ಮೋಹನ ಆಚಾರ್ಯ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಉಪಾಧ್ಯಕ್ಷರಾಗಿ ಕೌಶಿಲ್ ಶೆಟ್ಟಿ ಬಾಳಿಕೆ, ಕಾರ್ಯದರ್ಶಿಯಾಗಿ ಕುಶಾಲಪ್ಪಅಮ್ಟೂರು, ಜೊತೆ ಕಾರ್ಯದರ್ಶಿ ರೋಹಿತ್ ಅಮ್ಟೂರು, ಕೋಶಾಧಿಕಾರಿಯಾಗಿಕಾರ್ತಿಕ್ ಪೊಯ್ಯಕಂಡ, ಲೆಕ್ಕಪರಿಶೋಧಕರಾಗಿ ಶಂಕರ ಅಂಚನ್ ಪೊಯ್ಯಕಂಡ, ಮತ್ತು ಭಜನಾ ಸಂಘಟಕರಾಗಿ ಸುರೇಶ ಅಮ್ಟೂರು, ಸತೀಶ ಪೊಯ್ಯಕಂಡ, ಸುರೇಂದ್ರ ಪೊಯ್ಯಕಂಡ, ಪುರುಷೋತ್ತಮ ಶಾಂತಿಪಲಿಕೆ, ಉಮಾನಾಥ, ಗೌರವಾಧ್ಯಕ್ಷರಾಗಿ ಶಂಕರನಾರಾಯಣ ಐತಾಳ್ ಓಣಿಬೈಲು ಹಾಗೂ ಹಿಂದಿನ ಎಲ್ಲಾ ಪದಾಧಿಕಾರಿಗಳನ್ನು ಸಲಹೆಗಾರರಾಗಿ ಮತ್ತು ಕಾರ್ಯಕಾರಿಣಿ ಸಮಿತಿ ಸದಸ್ಯರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಕುಶಾಲಪ್ಪ ಅಮ್ಟೂರು ಸ್ವಾಗತಿಸಿ, ನಿರ್ವಹಿಸಿದರು.ರಮೇಶ್ ಕರಿಂಗಾಣ ವಂದಿಸಿದರು.
Kshetra Samachara
09/11/2021 03:50 pm