ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೆರಾರ:ಪವಿತ್ರ ಬಂಟಕಂಬ ಮರದ ಬೃಹತ್ ಮೆರವಣೆಗೆಗೆ ಚಾಲನೆ

ಬಜಪೆ:ಪೆರಾರ ಶ್ರೀ ಬಲವಾಂಡಿ ದೈವಸ್ಥಾನದ ಬಂಟಕಂಬ ರಾಜಾಂಗಣದ ಜೀರ್ಣೋದ್ದಾರದ ಅಂಗವಾಗಿ ನೂತನವಾಗಿ ಪ್ರತಿಷ್ಠಾಪಿಸಲ್ಪಡುವ ಪವಿತ್ರ ಬಂಟಕಂಬ ಮರದ ಬೃಹತ್ ಮೆರವಣೆಗೆಗೆಯು ಇಂದು ಗಂಜಿಮಠ ಮಹಾಗಣಪತಿ ದೇವಸ್ಥಾನದ ವಠಾರದಲ್ಲಿ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಹಾಗೂ ಬಂಟಕಂಬ ರಾಜಾಂಗಣ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಡಾ. ಭರತ್ ಶೆಟ್ಟಿಅವರು ಚಾಲನೆ ನೀಡಿದರು. ಸಂಭ್ರಮದ ಬೃಹತ್ ಮೆರವಣೆಗೆಯಲ್ಲಿ ಚೆಂಡೆ, ವಾದ್ಯ ಹಾಗೂ ವಿವಿಧ ಭಜನಾ ತಂಡಗಳ ಕುಣೆತ ಭಜನೆಯೊಂದಿಗೆ ಮೆರುಗು ನೀಡಿದವು.ಬೃಹತ್ ಮೆರವಣಿಗೆ ಮೂಲಕ ಬಂಟಕಂಬದ ಮರವು ಪೆರಾರ ಶ್ರೀ ಬಲವಾಂಡಿ ಕ್ಷೇತ್ರಕ್ಕೆ ಸಾಗಿತು.

ಈ ಸಂದರ್ಭ ಕ್ಷೇತ್ರದ ಪೆರ್ಗಡೆಯವರಾದ ಮುಂಡಬೆಟ್ಟು ಗುತ್ತು ಗಂಗಾಧರ್ ರೈ, ಸಮಿತಿ ಕಾರ್ಯಾಧ್ಯಕ್ಷ ಶಿವಾಜಿ ಶೆಟ್ಟಿ ಕೊಳಕೆಬೈಲ ಜೀರ್ಣೋದ್ದಾರ ಸಮಿತಿಯ ಸದಸ್ಯರುಗಳಾದ ಪ್ರಾಣಿಬೆಟ್ಟು ಡಾ. ಮೋಹನದಾಸ್ ರೈ, ಶೇಖರ ಸಫಲಿಗ, ವಿದ್ಯಾ ಜೋಗಿ, ಕಾಶಿನಾಥ್ ಕಾಮತ್, ಹರೀಶ್ ಶೆಟ್ಟಿ, ಪ್ರತೋಷ್ ಮಲ್ಲಿ, ಸಮಿತಿ ಕಾರ್ಯದರ್ಶಿ ಸುರೇಶ್ ಅಂಚನ್, ವಿಜಯ ಪ್ರಕಾಶ್ ಮಲ್ಲಿ, ಕ್ಷೇತ್ರದ ಆಡಳಿತಾಧಿಕಾರಿ ಸಾಯಿಶ್ ಚೌಟ, ಕಟೀಲು ಯಕ್ಷಗಾನ ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಶಾಂತಿಭವನ ರಾಘವೇಂದ್ರ ಭಟ್ ಬಜಪೆ, ದೋಣಿ0ಜೆ ಗುತ್ತು ಪ್ರಮೋದ್ ರೈ, ಕ್ಷೇತ್ರದ ಮುಕ್ಕಾಲ್ದಿ ಬಾಲಕೃಷ್ಣ ಶೆಟ್ಟಿ, ಗುರುಪುರ ಉಪತಹಶೀಲ್ದಾರ್ ಶಿವಪ್ರಸಾದ್, ಕಬೆತ್ತಿಗುತ್ತು ಮೋಹನ್, ಪಡುಪೆರಾರ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಅಮಿತಾ ಮೋಹನ್ ಶೆಟ್ಟಿ, ಹಾಗೂ ಗುತ್ತುಮನೆತನದವರು, ಕ್ಷೇತ್ರದ ಸಿಬ್ಬಂದಿವರ್ಗ, ಊರ ಮುಂದಾಳುಗಳು, ಭಕ್ತಾದಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

Edited By : Shivu K
Kshetra Samachara

Kshetra Samachara

08/11/2021 08:02 am

Cinque Terre

13.47 K

Cinque Terre

0

ಸಂಬಂಧಿತ ಸುದ್ದಿ