ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಡಬ: ಕುಕ್ಕೆಗೆ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಕುಟುಂಬಸ್ಥರೊಂದಿಗೆ ಭೇಟಿ

ಸುಬ್ರಹ್ಮಣ್ಯ: ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅವರು ಕಡಬ ತಾಲೂಕಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇ‌ತ್ರಕ್ಕೆ ಇಂದು ಭೇಟಿ ನೀಡಿದರು.

ಕುಟುಂಬದವರೊಂದಿಗೆ ಆಗಮಿಸಿದ ಪ್ರವೀಣ್ ಸೂದ್ ಅವರು ಆಶ್ಲೇಷ ಬಲಿ, ನಾಗ ಪ್ರತಿಷ್ಠೆ, ಮಹಾಪೂಜೆ, ಅಭಿಷೇಕ ನೆರವೇರಿಸಿದರು. ಶ್ರೀ ದೇವರ ದರುಶನ ಪಡೆದು ಪ್ರಸಾದ ಸ್ವೀಕರಿಸಿದರು.

ಪ್ರವೀಣ್ ಸೂದ್ ಅವರ ಪತ್ನಿ, ಮಗಳು ಹಾಗೂ ಅಳಿಯ ಕ್ರಿಕೆಟ್ ಆಟಗಾರ ಮಾಯಾಂಕ್ ಅಗರ್ವಾಲ್ ಜೊತೆಗಿದ್ದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ಇಒ ಡಾ. ನಿಂಗಯ್ಯ ಬರಮಾಡಿಕೊಂಡರು. ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ, ಎಸ್ಪಿ ಋಷಿಕೇಶ್ ಸೋನಾವಣೆ, ಸುಳ್ಯ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ, ಎಸ್ ಐ ಜಂಬೂರಾಜ್ ಮಹಾಜನ್, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

Edited By : Vijay Kumar
Kshetra Samachara

Kshetra Samachara

17/10/2021 10:27 pm

Cinque Terre

15.99 K

Cinque Terre

1

ಸಂಬಂಧಿತ ಸುದ್ದಿ