ಪಾಜಕ: ಮಧ್ವಾಚಾರ್ಯರ ಅವತಾರ ಕ್ಷೇತ್ರವಾದ ಪಾಜಕ ಕ್ಷೇತ್ರದಲ್ಲಿ ವಾದಿರಾಜರು ಪ್ರತಿಷ್ಠಾಪಿಸಿರುವ ಕ್ಷೇತ್ರದ ಸನ್ನಿಧಿಯಲ್ಲಿ ಮಧ್ವ ಜಯಂತಿ ಉತ್ಸವ ನಡೆಯಿತು.
ಈ ಪ್ರಯುಕ್ತ ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಗಳ ನೇತೃತ್ವದಲ್ಲಿ ಪಂಚಾಮೃತ ಅಭಿಷೇಕ ಸೇವೆ, ಪಟ್ಟದ ದೇವರ ಪೂಜೆ ನಡೆದವು. ಬಳಿಕ ವಿದ್ವಾಂಸರಿಂದ ಸಮುದ್ರ ವಿಜಯ ಪಾರಾಯಣ ಸರ್ವಮೂಲ ಗ್ರಂಥ ಪಾರಾಯಣ ಹಾಗೂ ಪ್ರವಚನ ಜರುಗಿತು.
ಶ್ರೀಗಳ ನೇತೃತ್ವದಲ್ಲಿ ದೇವರ ಸಮ್ಮುಖ ರಂಗಪೂಜೆ, ಪಲ್ಲಕ್ಕಿ ಉತ್ಸವಾದಿ ಸೇವೆಗಳು ಸಂಪನ್ನಗೊಂಡವು. ಬಳಿಕ ಕಾಣಿಯೂರು ಶ್ರೀಗಳು ಆಶೀರ್ವಚನ ನೀಡಿದರು. ಈ ಸಂದರ್ಭ ಸೀಮಿತ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.
Kshetra Samachara
16/10/2021 01:54 pm