ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣ ನಾಥ ಕ್ಷೇತ್ರದಲ್ಲಿ ನಡೆದ 'ಮಂಗಳೂರು ದಸರಾ' ಮಹೋತ್ಸವದಲ್ಲಿ ಪೂಜಿಸಲ್ಪಟ್ಟ ದೇವರ ವಿಸರ್ಜನೆ ಪೂಜೆ ಶ್ರದ್ಧಾಭಕ್ತಿಯಿಂದ ಜರುಗಿತು.
ಶ್ರೀ ಕ್ಷೇತ್ರದಲ್ಲಿ ಕಳೆದ 9 ದಿನಗಳಿಂದಲೂ ಆರಾಧನೆಗೊಳ್ಳುತ್ತಿದ್ದ ಶ್ರೀ ಶಾರದಾ ಮಾತೆ, ಶ್ರೀ ನವದುರ್ಗೆಯರ ಮೂರ್ತಿ ಗಳನ್ನು ಜಲಸ್ತಂಭನ ಮಾಡುವ ಮೂಲಕ ಮಂಗಳೂರು ದಸರಾಕ್ಕೆ ಅದ್ಧೂರಿ ತೆರೆ ಬಿತ್ತು.
ಅ.7ರಂದು ನವರಾತ್ರಿ ಆರಂಭ ದಿನದಿಂದ 9 ದಿನಗಳ ವರೆಗೆ ಶ್ರೀ ಶಾರದೆ, ಶ್ರೀ ನವದುರ್ಗೆಯರ ಸಹಿತ ಶ್ರೀ ಮಹಾಗಣಪತಿ ದೇವರ ಮೂರ್ತಿ ಪ್ರತಿಷ್ಠಾಪಿಸಿ, ಆರಾಧನೆ ಮಾಡಲಾಗಿತ್ತು. ನಿನ್ನೆ ವಿಜಯದಶಮಿಯಂದು ಎಲ್ಲ ಮೂರ್ತಿಗಳನ್ನು ದೇವಾಲಯದ ಪುಷ್ಕರಣಿಯಲ್ಲಿ ಜಲಸ್ತಂಭನಗೊಳಿಸುವ ಮೂಲಕ ಮಂಗಳೂರು ದಸರಾ ಮುಕ್ತಾಯಗೊಂಡಿತು.
ನಿನ್ನೆ ಶುಕ್ರವಾರ ರಾತ್ರಿ 8:30ರ ವೇಳೆಗೆ ವಿಸರ್ಜನಾ ಪೂಜೆ ನಡೆದು ದೇವಳದ ಪುಷ್ಕರಣಿಯಲ್ಲಿ ಜಲಸ್ತಂಭನ ಮಾಡಲಾಯಿತು.
ತಡರಾತ್ರಿಯವರೆಗೂ ಭಕ್ತಾದಿಗಳು ದೇವರ ವಿಸರ್ಜನಾ ಪೂಜಾ ವೈಭವ ವೀಕ್ಷಿಸಿದರು.
Kshetra Samachara
16/10/2021 12:06 pm