ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ರಥೋತ್ಸವ

ಕುಂದಾಪುರ: ಕುಂದಾಪುರ ತಾಲೂಕಿನ ಪ್ರಸಿದ್ಧ ಕಮಲಶಿಲೆಯ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ರಥೋತ್ಸವ ಸಂಪನ್ನಗೊಂಡಿತು.

ಕಳೆದ ಒಂಭತ್ತು ದಿನಗಳಿಂದ ನಡೆಯುತ್ತಿದ್ದ ವೈಭವದ ನವರಾತ್ರಿ ಉತ್ಸವದ ಅಂಗವಾಗಿ ನವರಾತ್ರಿ ಉತ್ಸವದಲ್ಲಿ ಬೆಳ್ಳಿಯ ರಥದಲ್ಲಿ ಶ್ರೀ ದೇವಿಯ ರಥೋತ್ಸವ ಸಂಪನ್ನಗೊಂಡಿತು. ಅ.7 ರಿಂದ 15 ರ ವರೆಗೆ ಪ್ರತಿದಿನ ತ್ರಿಕಾಲ ಪೂಜೆ, ನವರಾತ್ರಿ ವಿಶೇಷ, ಮಹಾಪೂಜೆ, ಸುತ್ತುಬಲಿಗಳನ್ನು ನಡೆಸಲಾಗಿತ್ತು. ಮಧ್ಯಾಹ್ನ ಚಂಡಿಕಾ ಹವನ, ಅನ್ನ ಸಂತರ್ಪಣೆ, ನಿನ್ನೆ ಸಂಜೆ ರಂಗಪೂಜೆ, ರಾತ್ರಿ ರಥಬೀದಿ ಹಾಗೂ ರಾಜ ಬೀದಿಯಲ್ಲಿ ಬೆಳ್ಳಿ ರಥೋತ್ಸವ ನಂತರ ರಾಜಬೀದಿಯಲ್ಲಿ ಲಾಲ್ಕಿ ಉತ್ಸವ ನಡೆಯಿತು.

ಇದಕ್ಕೂ ಮುನ್ನ ಕದಿರು ಮುಹೂರ್ತ, ಕಣಜ ತುಂಬಿಸುವ ವಿಧಿವಿಧಾನ, ದಶಮಿ ಪೂಜೆ, ವಿಜಯೋತ್ಸವ ದಶಮಿ ಉತ್ಸವ ನಡೆಯಿತು.

Edited By : Shivu K
Kshetra Samachara

Kshetra Samachara

15/10/2021 01:23 pm

Cinque Terre

4.8 K

Cinque Terre

0

ಸಂಬಂಧಿತ ಸುದ್ದಿ