ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು: ಧರ್ಮ ಶಿಕ್ಷಣ ಇಂದಿನ ಅನಿವಾರ್ಯತೆ-- ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ

ಪುತ್ತೂರು: ನಮ್ಮ ಶಾಲೆಗಳಲ್ಲಿ ಧಾರ್ಮಿಕ ಶಿಕ್ಷಣ ನಿರೀಕ್ಷೆ ಮಾಡುವುದು ಕಷ್ಟ. ಇಂಥ ಸಂದರ್ಭದಲ್ಲಿ ದೇವಸ್ಥಾನಗಳಂಥ ಧಾರ್ಮಿಕ ಕೆಂದ್ರದಲ್ಲಿ ಧಾರ್ಮಿಕ ಗ್ರಂಥಾಲಯದ ಮೂಲಕ ಧರ್ಮ ಜ್ಞಾನ ನೀಡುವುದು ಉತ್ತಮ ಸಂಗತಿ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ತೀರ್ಥ ಸ್ವಾಮೀಜಿ ಹೇಳಿದರು.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ಶ್ರೀ ದೇವಳದಲ್ಲಿ ಆರಂಭಿಸಲಾಗಿರುವ ಧಾರ್ಮಿಕ ಗ್ರಂಥಾಲಯ ಲೋಕರ್ಪಾಣೆ ಸಮಾರಂಭದಲ್ಲಿ ಮಂಗಳವಾರ ದೀಪ ಪ್ರಜ್ವಲನೆ ಮಾಡಿ ಆಶೀರ್ವಚನ ನೀಡಿದರು.

ದೇಶದ ಧಾರ್ಮಿಕ ಕೇಂದ್ರಗಳ ಪೈಕಿ ಇದೊಂದು ಪ್ರಥಮ ಪ್ರಯೋಗ. ಇತರ ಧರ್ಮಗಳ ಧಾರ್ಮಿಕ ಕೇಂದ್ರಗಳು ಜತೆಯಲ್ಲೇ ಧಾರ್ಮಿಕ ಶಿಕ್ಷಣ ನೀಡುತ್ತವೆ. ನಮ್ಮ ಧರ್ಮದಲ್ಲಿ ಇಂಥ ವ್ಯವಸ್ಥೆ ಇಲ್ಲ. ಹೀಗಿರುವಾಗ ಪುತ್ತೂರು ದೇಗುಲದಲ್ಲಿ ಧಾರ್ಮಿಕ ಶಿಕ್ಷಣ ಮತ್ತು ಧಾರ್ಮಿಕ ಗ್ರಂಥಾಲಯ ಎರಡೂ ಆರಂಭಿಸಿರುವುದು ಇವತ್ತಿನ ಕಾಲದಲ್ಲಿ ಅಗತ್ಯವಾದ ವ್ಯವಸ್ಥೆ. ಎಲ್ಲರೂ ದೇವಸ್ಥಾನಕ್ಕೆ ಬಂದು ಕೈ ಮುಗಿದು ಹೋಗುತ್ತಾರೆ. ಆದರೆ ಇದರ ಹಿಂದಿನ ಸತ್ಯ ಏನು? ದೇವಳ ಭೇಟಿ ಯಾಕೆ ಬೇಕು ಎಂಬ ಮಾಹಿತಿಯೂ ಸೇರಿದಂತೆ ಧರ್ಮದ ಬಗ್ಗೆ ಕನಿಷ್ಠ ಮಾಹಿತಿಯೂ ಇಂದಿನ ಪೀಳಿಗೆಯಲ್ಲಿ ಇಲ್ಲ. ಒಂದು ಧರ್ಮದ ಜನ ಅದನ್ನು ಬಿಟ್ಟು ಇನ್ನೊಂದು ಧರ್ಮ ಸೇರಲು ಧಾರ್ಮಿಕ ಶಿಕ್ಷಣದ ಕೊರತೆ ಮತ್ತು ಧಾರ್ಮಿಕತೆಯ ಅರಿವಿನ ಕೊರತೆ ಕಾರಣ. ನಮ್ಮ ಧಮದ ಸಾರ ಏನು ಎಂಬುದು ಇಂದಿನ ಪಿಳೀಗೆಗೆ ತಿಳಿದಿಲ್ಲ. ಅದನ್ನು ನೀಡುವ ಕೆಲಸ ಇಲ್ಲಿ ಆಗಲಿರುವುದು ಉತ್ತಮ ಎಂದರು.

Edited By : Nagesh Gaonkar
Kshetra Samachara

Kshetra Samachara

13/10/2021 03:40 pm

Cinque Terre

9.45 K

Cinque Terre

0

ಸಂಬಂಧಿತ ಸುದ್ದಿ