ಮುಲ್ಕಿ: ಹಿಂದೂ ಯುವಸೇನೆ ಮುಲ್ಕಿ ಘಟಕ ಹಾಗೂ ಮಹಿಳಾ ಮಂಡಳಿ ಆಶ್ರಯದಲ್ಲಿ 23ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ವೈಭವದ ಶೋಭಾಯಾತ್ರೆಯೊಂದಿಗೆ ಸೋಮವಾರ ಸಮಾರೋಪಗೊಂಡಿತು.
ಪ್ರಾತಃಕಾಲ ಎಂಟು ಗಂಟೆಗೆ ಅರ್ಚಕ ಪ್ರಶಾಂತ್ ಭಟ್ ನೇತೃತ್ವದಲ್ಲಿ ಗಣಹೋಮ, ಶ್ರೀ ಶಾರದಾ ಮಾತೆಯ ಪ್ರತಿಷ್ಠೆ ಹಾಗೂ ಧರ್ಮದರ್ಶಿ ಹರಿಕೃಷ್ಣ ಪುನರೂರು ನೇತೃತ್ವದಲ್ಲಿ ದೀಪ ಪ್ರಜ್ವಲನೆ ಹಾಗೂ ಧ್ವಜಾರೋಹಣದ ಮೂಲಕ ಚಾಲನೆ ನೀಡಲಾಯಿತು.
ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಿತು. ಸಂಜೆ ವಿಸರ್ಜನಾ ಪೂಜೆ ಬಳಿಕ ಶ್ರೀ ಶಾರದಾ ಮಾತೆಯ ಶೋಭಾಯಾತ್ರೆಯು ವಿವಿಧ ಬಿರುದಾವಳಿಗಳೊಂದಿಗೆ ಶಿವಾಜಿ ಮಂಟಪದಿಂದ ಹೊರಟು ಮುಲ್ಕಿ ಬಸ್ಸು ನಿಲ್ದಾಣ, ಒಡೆಯರಬೆಟ್ಟು ಮಾರ್ಗವಾಗಿ ಸಾಗಿ, ಕಟ್ಟದಂಗಡಿ ಬಳಿಯ ಶಾಂಭವಿ ನದಿಯಲ್ಲಿ ಜಲಸ್ತಂಭನ ಗೊಳಿಸಲಾಯಿತು.
ಶಾಸಕ ಉಮಾನಾಥ ಕೋಟ್ಯಾನ್, ಹಿಂದೂ ಯುವ ಸೇನೆ ಕೇಂದ್ರೀಯ ಮಂಡಳಿ ಅಧ್ಯಕ್ಷ ಯಶೋಧರ ಚೌಟ, ಗೌರವಾಧ್ಯಕ್ಷ ಭಾಸ್ಕರಚಂದ್ರ ಶೆಟ್ಟಿ, ಶ್ರೀ ಗಣೇಶೋತ್ಸವ ಸಮಿತಿಯ ಸುರೇಶ್ ಶೆಟ್ಟಿ ಕೊಟ್ಟಾರ, ಹಿಂದೂ ಯುವಸೇನೆ ಮುಲ್ಕಿ ಸ್ಥಾಪಕಾಧ್ಯಕ್ಷ ಗೋವಿಂದ ಕೋಟ್ಯಾನ್, ಅಧ್ಯಕ್ಷ ಸುನಿಲ್ ಕುಮಾರ್ ಕಿಲ್ಪಾಡಿ, ಉಪಾಧ್ಯಕ್ಷ ಶಂಕರ್ ಪಡಂಗ, ಪ್ರಧಾನ ಕಾರ್ಯದರ್ಶಿ ಸುಧಾಕರ ಆಚಾರ್ಯ ಕೋಶಾಧಿಕಾರಿ ರಂಗ ಕೋಟ್ಯಾನ್ ಮಹಿಳಾ ಮಂಡಳಿ ಅಧ್ಯಕ್ಷೆ ನೀರಜಾ ಅಗರ್ವಾಲ್, ಕಾರ್ಯದರ್ಶಿ ಸುಲತಾ, ಮುಲ್ಕಿ ನಪಂ ಸದಸ್ಯ ಹರ್ಷರಾಜ ಶೆಟ್ಟಿ, ದಿನೇಶ್ ಕೊಲ್ನಾಡು ಮತ್ತಿತರರು ಉಪಸ್ಥಿತರಿದ್ದರು.
Kshetra Samachara
12/10/2021 10:35 am