ಮುಲ್ಕಿ: ಮುಲ್ಕಿ ಸಮೀಪದ ಕುಂಜಾರಗಿರಿ ಶ್ರೀ ಮಹಾಲಿಂಗೇಶ್ವರ ಶಾಸ್ತಾವು ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ದುರ್ಗಾ ನಮಸ್ಕಾರ ಪೂಜೆ ಗುರುವಾರ ಸಂಜೆ ವಿಜ್ರಂಭಣೆಯಿಂದ ನಡೆಯಿತು.ಸಂಜೆ 6 ಗಂಟೆಗೆ ಕೊಲಕಾಡಿ ವೇದಮೂರ್ತಿ ವಾದಿರಾಜ ಉಪಾಧ್ಯಾಯರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆದು ದೇವಸ್ಥಾನದ ಅರ್ಚಕ ವೇದಮೂರ್ತಿ ಶ್ರೀಕಾಂತ್ ಭಟ್ ದುರ್ಗಾ ನಮಸ್ಕಾರ ಪೂಜೆ ಗೆ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.
ಈ ಸಂದರ್ಭ ವೇದಮೂರ್ತಿ ವಾದಿರಾಜ ಉಪಾಧ್ಯಾಯ ಕೊಲಕಾಡಿ ಮಾತನಾಡಿ ನವರಾತ್ರಿಯ ಪರ್ವ ದಿನದಲ್ಲಿ ಪೂಜಾ ಕೈಂಕರ್ಯಗಳ ಮೂಲಕ ದೇವರ ಸೇವೆ ಮುಖಾಂತರ ಲೋಕಕ್ಕೆ ಬಂದಿರುವ ಸರ್ವ ದುರಿತಗಳು ನಾಶವಾಗಲಿ ಎಂದು ಆಶೀರ್ವಚನ ನೀಡಿದರು.
ಈ ಸಂದರ್ಭ ಶ್ರೀಪತಿ ಭಟ್ ಪರಂಕಿಲ, ಉದ್ಯಮಿ ಎನ್ ಟಿ .ಕೋಟ್ಯಾನ್ ಮುಂಬೈ, ದೆಪ್ಪುಣಿಗುತ್ತು ಸುಧಾಕರ ಶೆಟ್ಟಿ ಮುಂಬೈ,ಗೋಪಿನಾಥ ಪಡಂಗ, ಮನೋಹರ ಕೋಟ್ಯಾನ್, ಗಂಗಾಧರ್ ಶೆಟ್ಟಿ ಬರ್ಕೆ ತೋಟ, ಮಾಲತಿ ಸುವರ್ಣ, ಮುಲ್ಕಿ ವಿಜಯ ರೈತ ಸೊಸೈಟಿ ಅಧ್ಯಕ್ಷ ರಂಗನಾಥ ಶೆಟ್ಟಿ, ಯುವಕ ವೃಂದದ ಅಧ್ಯಕ್ಷ ಅಣ್ಣು ಕೋಟ್ಯಾನ್ ಮೈಲೊಟ್ಟು, ಭಜನಾ ಸಂಚಾಲಕ ಗಿರೀಶ್ ಅಂಚನ್,ರಂಜನ್ ಶೆಟ್ಟಿ ಕೆಂಪುಗುಡ್ಡೆ, ಪುಷ್ಪರಾಜ ಕೊಲಕಾಡಿ, ಶಂಕರ್ ಪಡಂಗ ಮತ್ತಿತರರು ಉಪಸ್ಥಿತರಿದ್ದರು.
ಬಳಿಕ ಅನ್ನಸಂತರ್ಪಣೆ ನಡೆಯಿತು. ಸಾವಿರಾರು ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Kshetra Samachara
08/10/2021 12:32 pm