ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧರ್ಮಸ್ಥಳ: ಭಜನೆಯ ಮೂಲಕ ಭಗವಂತನ ಸಾಕ್ಷಾತ್ಕಾರ ಸಾಧ್ಯವಾಗುತ್ತದೆ: ಎಡನೀರು ಶ್ರೀ

ಧರ್ಮಸ್ಥಳ: ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಒಂದು ವಾರ ನಡೆದ ಭಜನಾ ತರಬೇತಿ ಕಮ್ಮಟ ಸಮಾರೋಪಗೊಂಡಿದೆ, ಅಮೃತವರ್ಷಿಣಿ ಸಭಾಭವನದಲ್ಲಿ ಜರಗಿದ ಸಮಾರೋಪ ಕಾರ್ಯಕ್ರಮದಲ್ಲಿ ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮಿಜೀ, ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆ, ಮಾಣಿಲ ಕ್ಷೇತ್ರದ ಪರಮಹಂಸ ಮೋಹನದಾಸ ಸ್ವಾಮಿಜೀ,ಡಿ ಹರ್ಷೆಂದ್ರ ಕುಮಾರ್ ಪರಿಷತ್ ಸದಸ್ಯ ಕೆ ಪ್ರತಾಪಸಿಂಹ ನಾಯಕ್, ಹರಿಕೃಷ್ಣ ಪುನರೂರು,ಪ್ರದೀಪ್ ಕಲ್ಕೂರ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.ಎಡನೀರು ಮಠದ ಪೂಜ್ಯ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅಶೀರ್ವಚ ನೀಡಿದ್ರು ಕಲಿಯುಗದಲ್ಲಿ ಪಾಮರರಿಂದ ಪಂಡಿತರವರೆಗೂ ಎಲ್ಲರೂ ಭಜನೆಯ ಮೂಲಕ ಭಗವಂತನನ್ನು ಒಲಿಸಿಕೊಳ್ಳಬಹುದು. ಭಜನೆಯ ಮೂಲಕ ಭಗವಂತನ ಸಾಕ್ಷಾತ್ಕಾರ ಸಾಧ್ಯವಾಗುತ್ತದೆ.ಬೇರೆ ಬೇರೆ ಕಡೆಗಳಿಂದ ಬರುವ ನದಿಗಳು ಸಮುದ್ರವನ್ನು ಸೇರುವಂತೆ ಭಕ್ತರು ಪರಿಶುದ್ಧ ಭಕ್ತಿಯಿಂದ ಯಾವ ರೀತಿ ಭಜಿಸಿದರೂ ಭಗವಂತನನ್ನು ಒಲಿಸಿಕೊಳ್ಳಬಹುದು ಎಂದರು.

7 ದಿನ ನಡೆದ ಭಜನಾ ತರಬೇತಿ ಕಮ್ಮಟದಲ್ಲಿ,

128 ಭಜನಾ ಮಂಡಳಿಗಳಿಂದ 138 ಪುರುಷರು ಹಾಗೂ 75 ಮಂದಿ ಮಹಿಳೆಯರು ಸೇರಿದಂತೆ ಒಟ್ಟು 213 ಮಂದಿ ಭಾಗವಹಿಸಿದರು..

Edited By : Nagesh Gaonkar
Kshetra Samachara

Kshetra Samachara

07/10/2021 07:57 pm

Cinque Terre

10.43 K

Cinque Terre

0

ಸಂಬಂಧಿತ ಸುದ್ದಿ