ಮುಲ್ಕಿ: ಮುಲ್ಕಿಯ ಇತಿಹಾಸ ಪ್ರಸಿದ್ಧ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಸರಳ ರೀತಿಯಲ್ಲಿ ಆರಂಭವಾಗಿದೆ.
ಬೆಳಿಗ್ಗೆ ವಿಶೇಷ ಪ್ರಾರ್ಥನೆ, ಮುಲ್ಕಿ ಬಪ್ಪನಾಡು ಗುತ್ತು ನಡುಮನೆ ಶೈಲಜಾ ಶೆಟ್ಟಿ ಮತ್ತು ಕುಟುಂಬದವರಿಂದ ಸೇವಾರೂಪದಲ್ಲಿ ಶಿಬರೂರು ಗೋಪಾಲಕೃಷ್ಣ ತಂತ್ರಿ ಹಾಗೂ ಅರ್ಚಕ ಶ್ರೀಪತಿ ಉಪಾಧ್ಯಾಯ ನೇತೃತ್ವದಲ್ಲಿ ಚಂಡಿಕಾ ಯಾಗ,
ಮಧ್ಯಾಹ್ನ ವಿಶೇಷ ಪೂಜೆ, ಅನ್ನ ಸಂತರ್ಪಣೆ ಜರುಗಿತು. ಅನ್ನಸಂತರ್ಪಣೆಯಲ್ಲಿ ಸ್ವಯಂಸೇವಕರಾಗಿ ಶ್ರೀನಾರಾಯಣಗುರು ಮಹಿಳಾ ಮಂಡಳಿ ಸದಸ್ಯರು ಭಾಗವಹಿಸಿದ್ದರು.
ಈ ಸಂದರ್ಭ ಅರ್ಚಕ ಶ್ರೀಪತಿ ಉಪಾಧ್ಯಾಯ ಅವರು ನವರಾತ್ರಿ ಹಬ್ಬದ ವಿಶೇಷತೆ ತಿಳಿಸಿ, ವಿಶ್ವಕ್ಕೆ ಬಂದಿರುವ ಸಕಲ ಸಂಕಷ್ಟ, ದುರಿತ ನಾಶವಾಗಲಿ ಎಂದು ಪ್ರಾರ್ಥಿಸಿದರು. ದೇವಸ್ಥಾನದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತ ಅರಸರು, ರಾಜ್ಯೋತ್ಸವ ಪ್ರಶಸ್ತಿ ವಿಜೇತ ನಾಗೇಶ್ ಬಪ್ಪನಾಡು, ಉದಯಕುಮಾರ್ ಶೆಟ್ಟಿ ಆಧಿಧನ್, ವಾಮನ್ ನಡಿಕುದ್ರು, ಅಕೌಂಟೆಂಟ್ ಶಿವಶಂಕರ್ ಮತ್ತಿತರರು ಉಪಸ್ಥಿತರಿದ್ದರು.ದೇವಳದಲ್ಲಿ ಅ. 7 ರಿಂದ 15ರ ವರೆಗೆ ಶರನ್ನವರಾತ್ರಿ ಅಂಗವಾಗಿ ಅ. 10ರಂದು ಲಲಿತಾ ಪಂಚಮಿ, ಅ.15ರಂದು ವಿಜಯ ದಶಮಿ ನಡೆಯಲಿದೆ.
Kshetra Samachara
07/10/2021 04:22 pm