ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಜಪೆ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಇಂದಿನಿಂದ ನವರಾತ್ರಿ ಪೂಜಾ ಮಹೋತ್ಸವ

ಬಜಪೆ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಇಂದಿನಿಂದ ಮೊದಲ್ಗೊಂಡು ಆ.15 ರ ಶುಕ್ರವಾರದ ತನಕ ವಿಜಯ ದಶಮೀ ಪರ್ಯಂತ ಶ್ರೀ ಭ್ರಾಮರೀ ಅವತಾರಿಣೆಯಾದ ದುರ್ಗಾಪರಮೇಶ್ವರೀ ಸನ್ನಿಧಿಯಲ್ಲಿ ನವರಾತ್ರಿ ಪೂಜಾ ಮಹೋತ್ಸವವು ನಡೆಯಲಿರುವುದು.

ತಾ. 10ಕ್ಕೆ ಲಲಿತಾಪಂಚಮೀ ತಾ. 12ಕ್ಕೆ ಮೂಲಾನಕ್ಷತ್ರ, ಶಾರದಾಪೂಜೆ ತಾ. 14ಕ್ಕೆ ಮಹಾನವಮೀ ತಾ. 15ಕ್ಕೆ ವಿಜಯದಶಮೀ, ಮಧ್ವಜಯಂತೀ ವಿಶೇಷ ದಿನಗಳಾಗಿವೆ. ಕೋವಿಡ್ ಕಾರಣದಿಂದಗಿ ಕಳೆದ ಬಾರಿಯಂತೆ ಈ ಬಾರಿಯೂ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಸರಳ ರೀತಿಯಲ್ಲಿ ನಡೆಯಲಿದ್ದು, ಈ ಬಾರಿಯೂ ಲಲಿತ ಪಂಚಮಿಯಂದು ಶೇಷ ವಸ್ತ್ರ ವಿತರಣೆ ಇರುವುದಿಲ್ಲ. ನವರಾತ್ರಿ ಸಂದರ್ಭ ಕೊಡೆತೂರು, ಕಟೀಲು ಮತ್ತು ಎಕ್ಕಾರಿನಿಂದ ಬರುವ ಹುಲಿವೇಷ ಮೆರವವಣಿಗೆಗಳೂ ಸರಳ ರೀತಿಯಲ್ಲಿ ಬರಲಿವೆ.

Edited By : Manjunath H D
Kshetra Samachara

Kshetra Samachara

07/10/2021 01:51 pm

Cinque Terre

7.79 K

Cinque Terre

0

ಸಂಬಂಧಿತ ಸುದ್ದಿ